ದಕ್ಷಿಣ ಕೊರಿಯಾ : ಕೋವಿಡ್ ಪ್ರಕರಣಗಳ ಸಂಖ್ಯೆ 245,158ಕ್ಕೆ ಏರಿಕೆ
ಸಿಯೋಲ್, ಆಗಸ್ಟ್ 27: ದಕ್ಷಿಣ ಕೊರಿಯಾ ಕಳೆದ 24 ಗಂಟೆಯಲ್ಲಿ 1,841ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿನ ಒಟ್ಟು ಸಂಖ್ಯೆ 245,158 ಕ್ಕೆ ಏರಿಕೆಯಾಗಿದೆ.
ಕಳೆದ ಒಂದೇ ದಿನ ಎಂಟು ಸಾವುಗಳು ದೃಢಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 2,265 ಕ್ಕೆ ತಲುಪಿದೆ. ಒಟ್ಟು ಸಾವಿನ ಪ್ರಮಾಣವು ಶೇಕಡಾ 0.92 ರಷ್ಟಿದೆ.
ಸಂಪೂರ್ಣ ಚೇತರಿಸಿಕೊಂಡ ನಂತರ ಒಟ್ಟು 1,802 ರೋಗಿಗಳು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 214,673 ಕ್ಕೆ ಹೆಚ್ಚಳವಾಗಿದೆ. ಚೇತರಿಕೆಯ ದರವು ಶೇಕಡಾ 87.57 ರಷ್ಟಿದೆ.