ಅಂತರರಾಷ್ಟ್ರೀಯ

ಟರ್ಕಿಯಲ್ಲಿ ಹೊಸದಾಗಿ 2,106 ಜನರಿಗೆ ತಗುಲಿದ ಕೊರೋನ ಸೋಂಕು

ಟರ್ಕಿಯಲ್ಲಿ ಹೊಸದಾಗಿ  2,106 ಜನರಿಗೆ ತಗುಲಿದ ಕೊರೋನ ಸೋಂಕು

ಅಂಕಾರಾ, ನವೆಂಬರ್ 2:  ಟರ್ಕಿಯಲ್ಲಿ ಹೊಸದಾಗಿ  2,106 ಜನರಿಗೆ ಕೊರೋನ ಸೋಂಕು ತಗುಲಿದ್ದು , ಪರಿಣಾಮ  ದೇಶದಲ್ಲಿ ಸೋಂಕಿತರ ಸಂಖ್ಯೆ 377,473 ಕ್ಕೆ ಏರಿಕೆಯಾಗಿದೆ  ಎಂದು  ಟರ್ಕಿಶ್ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ಈ ನಡುವೆ  ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ  74 ಜನರು ಸಾವನ್ನಪ್ಪಿದ್ದು ಈವರೆಗೆ   ಸಾವಿನ ಸಂಖ್ಯೆ 10,326 ಕ್ಕೆ ತಲುಪಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 1,515 ರೋಗಿಗಳು ಚೇತರಿಸಿಕೊಂಡಿದ್ದಾರೆ . ಕೊರೋನ  ರೋಗಿಗಳಲ್ಲಿ ನ್ಯುಮೋನಿಯಾ ಪ್ರಮಾಣವು 5 ಪ್ರತಿಶತ ತೀವ್ರವಾಗಿ ಅನಾರೋಗ್ಯ ಪೀಡಿತರ  ಸಂಖ್ಯೆ 2,177 ಆಗಿದೆ.ಟರ್ಕಿಯಲ್ಲಿ  ಕಳೆದ ಮಾರ್ಚ್ 11 ರಂದು ಮೊದಲ ಕೊರೋನ  ಪ್ರಕರಣ ವರದಿಯಾಗಿತ್ತು.

ಕೊರೋನ  ವಿರುದ್ಧದ ಹೋರಾಟದಲ್ಲಿ ಟರ್ಕಿ ಮತ್ತು ಚೀನಾ ಪರಸ್ಪರ ಬೆಂಬಲ ನೀಡಿವೆ. ಕರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವುದು, ವೈದ್ಯಕೀಯ ಕಾರ್ಯಕರ್ತರನ್ನು ರಕ್ಷಿಸುವುದು ಮತ್ತು ಸೋಂಕು  ಹರಡುವುದನ್ನು ನಿಯಂತ್ರಿಸುವಲ್ಲಿ ಚೀನಾದ ಅನುಭವ ಹಂಚಿಕೊಳ್ಳಲು ಚೀನಾದ ವೈದ್ಯರು ಮತ್ತು ವೈದ್ಯಕೀಯ ತಜ್ಞರು ಟರ್ಕಿಯ ಸಹವರ್ತಿಗಳೊಂದಿಗೆ ನಿರಂತರ ವೀಡಿಯೊ ಸಮಾವೇಶಗಳನ್ನು ನಡೆಸಿದ್ದಾರೆ.

ಸುದ್ದಿ ಓದಿ