ಕೋವಿಡ್-19 ಸೋಂಕಿತರ ಸಂಖ್ಯೆ 191,000ಕ್ಕೆ ಏರಿಕೆ ; ವಿಶ್ವ ಆರೋಗ್ಯ ಸಂಸ್ಥೆ
ಮಾಸ್ಕೋ,ಮಾ 19, ಕಳೆದ 24 ಗಂಟೆಗಳಲ್ಲಿ ಜಾಗತಿಕವಾಗಿ ಸುಮಾರು 15,100 ಮಂದಿಗೆ ನೋವಲ್ ಕೊರೊನೊ ವೈರಸ್ ಹಬ್ಬಿದ್ದು, ಇದರಿಂದಾಗಿ ಒಟ್ಟು ಕೊರೊನಾ ದೃಢ ಪಟ್ಟ ಪ್ರಕರಣಗಳ ಸಂಖ್ಯೆ 191,1000 ಕ್ಕೆ ಏರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಇತ್ತಿಚಿನ ವರದಿಯಲ್ಲಿ ತಿಳಿಸಿದೆ.ವಿಶ್ವದೆಲ್ಲೆಡೆ 191,000 ಪ್ರಕರಣಗಳು ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 15, 123 ಪ್ರಕರಣಗಳು ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸೋಂಕಿನಿಂದ 786 ಮಂದಿ ಮೃತಪಟ್ಟಿದ್ದು ಒಟ್ಟು ಸಾವಿನ ಸಂಖ್ಯೆ 7,807ಕ್ಕೆ ಏರಿಕೆಯಾಗಿದೆ.