ಅಮೆರಿಕದಲ್ಲಿ ಹೆಚ್ಚುತ್ತಲೆ ಇದೆ ಕರೋನ ಸೋಂಕು ಪ್ರಕರಣಗಳು
ವಾಷಿಂಗ್ಟನ್, ಆಗಸ್ಟ್ 22: ಅಮೆರಿಕದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 5.6 ಮಿಲಿಯನ್ ಮೀರಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ಹೇಳಿದೆ. ರಾಷ್ಟ್ರೀಯ ಪ್ರಕರಣಗಳ ಸಂಖ್ಯೆ 5,607,993 ಕ್ಕೆ ಏರಿಕೆಯಾಗಿದ್ದು ದೇಶದಲ್ಲಿ ಈವರೆಗೆ ಸಾವಿನ ಸಂಖ್ಯೆ 1ಲಕ್ಷದ 74,924 ಕ್ಕೆ ತಲುಪಿದೆ ಎಂದೂ ಸಿಎಸ್‌ಎಸ್‌ಇ ವರದಿ ಮಾಡಿದೆ. ಅಮೆರಿಕದಲ್ಲಿನ ರಾಜ್ಯಗಳ ಪೈಕಿ ಕ್ಯಾಲಿಫೋರ್ನಿಯಾದಲ್ಲಿ 655,374 ಪ್ರಕರಣಗಳು, ಫ್ಲೋರಿಡಾ 593,286 ಪ್ರಕರಣಗಳು, ಟೆಕ್ಸಾಸ್ 580,448 ಪ್ರಕರಣಗಳು ಮತ್ತು ನ್ಯೂಯಾರ್ಕ್ 428,512 ಪ್ರಕರಣಗಳು ದಾಖಲಾಗಿವೆ. ಸಿಎಸ್‌ಎಸ್‌ಇ ಪ್ರಕಾರ, ಜಾರ್ಜಿಯಾ, ಇಲಿನಾಯ್ಸ್, ಅರಿಜೋನಾ ಮತ್ತು ನ್ಯೂಜೆರ್ಸಿಯ 180,000 ಕ್ಕೂ ಹೆಚ್ಚು ಪ್ರಕರಣಗಳು ಇದರಲ್ಲಿ ಸೇರಿವೆ. ಅಮೆರಿಕ ವಿಶ್ವದಲ್ಲಿ ಅತಿ ಹೆಚ್ಚು ಕರೋನ ಹಾನಿಗೊಳಗಾದ ರಾಷ್ಟ್ರವಾಗಿದೆ ವಿಶ್ವದಾದ್ಯಂತ ಅತಿ ಹೆಚ್ಚು ಸೋಂಕು ಮತ್ತು ಸಾವಿನ ಪ್ರಕರಣಗಳು ಇಲ್ಲಿಯೇ ದಾಖಲಾಗುತ್ತಿದೆ.