ಕೋವಿಡ್ 19 : ಒಂದೇ ದಿನ 33,208 ಪ್ರಕರಣ ದಾಖಲಿಸಿದ ರಷ್ಯಾ
ಮಾಸ್ಕೋ, ಅ. 16: ರಷ್ಯಾ ಕಳೆದ ದಿನದಲ್ಲಿ ದಾಖಲೆಯ ಸಂಖ್ಯೆಯ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದ್ದು, 33,208 ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಕೊರೋನಾ ವೈರಸ್ ಪ್ರತಿಕ್ರಿಯೆ ಕೇಂದ್ರ ಶನಿವಾರ ಹೇಳಿದೆ.
ಕೊರೋನಾ ಸೋಂಕಿಗೆ ಕಳೆದ 24 ಗಂಟೆಯಲ್ಲಿ 1,002 ರೋಗಿಗಳು ತಮ್ಮ ಜೀವವನ್ನು ಕಳೆದುಕೊಂಡ ನಂತರ ಸಾವಿನ ಸಂಖ್ಯೆ ಪ್ರಸ್ತುತ 222,315 ರಷ್ಟಿದೆ.
ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಸುಮಾರು 8 ಮಿಲಿಯನ್ ರಷ್ಯನ್ನರು ಕೋವಿಡ್ -19 ಗೆ ತುತ್ತಾಗಿದ್ದಾರೆ. ಹೊಸ ಸೋಂಕುಗಳ ವಿಷಯದಲ್ಲಿ ಮಾಸ್ಕೋ ಮುಂಚೂಣಿಯಲ್ಲಿದೆ, ಕಳೆದ 24 ಗಂಟೆಗಳಲ್ಲಿ 6,545 ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಸೇಂಟ್ ಪೀಟರ್ಸ್ಬರ್ಗ್ 3,088, ಮಾಸ್ಕೋ ಪ್ರದೇಶದಲ್ಲಿ 2,403 ಪ್ರಕರಣಗಳಿವೆ.
ಕಳೆದ ದಿನ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾದವರ ಸಂಖ್ಯೆ 21,883 ರಷ್ಟಿದ್ದು, ಒಟ್ಟು 6,981,907 ಕ್ಕೆ ಏರಿಕೆಯಾಗಿದೆ.