ಅಂತರರಾಷ್ಟ್ರೀಯ

ಕೋವಿಡ್ -೧೯; ಅಮೆರಿಕಾದಲ್ಲಿ ೪೩, ೨೦೦ ಮಂದಿ ಸಾವು

ಕೋವಿಡ್ -೧೯; ಅಮೆರಿಕಾದಲ್ಲಿ  ೪೩, ೨೦೦ ಮಂದಿ ಸಾವು

ನ್ಯೂಯಾರ್ಕ್, ಏ ೨೨, ಅಮೆರಿಕಾದಲ್ಲಿ  ಕೋವಿಡ್ -೧೯ ಸೋಂಕು  ಪ್ರಕರಣಗಳ ಸಂಖ್ಯೆ ೮ ಲಕ್ಷದ ಗಡಿ ದಾಟಿದೆ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ಪ್ರಕಾರ   ಅಮೆರಿಕಾದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ೮೦೪,೧೯೪ ಕ್ಕೆ ತಲುಪಿದೆ. ದೇಶದಲ್ಲಿ ಈವರೆಗೆ  ಒಟ್ಟು ೪೩,೨೦೦ ಮಂದಿ ಕೊರೊನಾ ಸೋಂಕಿನಿಂದ  ದಿಂದ ಸಾವನ್ನಪ್ಪಿದ್ದಾರೆ   ಎಂದು ಮಂಗಳವಾರ  ಅಂಕಿ ಅಂಶ ಲೆಕ್ಕಹಾಕಿದೆ.ದೇಶದಲ್ಲಿ ನ್ಯೂಯಾರ್ಕ್  ರಾಜ್ಯ  ಕೊರೊನಾ ಸೋಂಕಿನ  ತೀವ್ರ  ಬಾಧಿತ ರಾಜ್ಯವಾಗಿದ್ದು,  ಈ ರಾಜ್ಯವೊಂದರಲ್ಲೇ ೨ ಲಕ್ಷದ ೫೭ ಸಾವಿರದ ೧೨೫ ಸೋಂಕು ಪ್ರಕರಣಗಳು ವರದಿಯಾಗಿದ್ದು, ೧೮ ಸಾವಿರದ ೮೨೧ ಮಂದಿ ಮೃತಪಟ್ಟಿದ್ದಾರೆ. ನ್ಯೂಜೆರ್ಸಿಯಲ್ಲಿ  ೮೮, ೮೦೬ ಪ್ರಕರಣ ಹಾಗೂ ೪,೫೨೦ ಸಾವುಗಳು ಸಂಭವಿಸಿವೆ  ಇತರ ರಾಜ್ಯಗಳಾದ  ಮ್ಯಾಸಚೂಸೆಟ್ಸ್, ಪೆನ್ಸಿಲ್ವೇನಿಯಾ, ಕ್ಯಾಲಿಫೋರ್ನಿಯಾ, ಮಿಚಿಗನ್ ಮತ್ತು ಇಲಿನಾಯ್ಸ್  ನಲ್ಲಿ ೩೦,೦೦೦ ಕ್ಕೂ ಹೆಚ್ಚು ಪ್ರಕರಣಗಳು  ವರದಿಯಾಗಿವೆ ಸಿಎಸ್‌ಎಸ್‌ಇ  ಹೇಳಿದೆ.

ಸುದ್ದಿ ಓದಿ