ಕರೋನವೈರಸ್ : ಹಾಂಗ್ ಕಾಂಗ್‌ನಲ್ಲಿ ನ್ಯುಮೋನಿಯಾ ಪ್ರಕರಣಗಳ ಏರಿಕೆ
ಹಾಂಗ್ ಕಾಂಗ್, ಜನವರಿ 25 ,ಕರೋನವೈರಸ್ ನಿಂದ ಹೊಸದಾಗಿ ಇನ್ನೂ ಮೂರು ನ್ಯುಮೋನಿಯಾ ಪ್ರಕರಣ ವರದಿಯಾಗಿದ್ದು, ಒಟ್ಟು ದೃಡಪಡಿಸಿದ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.ವುಹಾನ್‌ನ ಮೂವರು ಪ್ರಯಾಣಿಕರ ಉಸಿರಾಟದ ಮಾದರಿಗಳನ್ನು ಕೊರೊನಾವೈರಸ್‌ಗೆ ಧನಾತ್ಮಕವಾಗಿ ಪರೀಕ್ಷಿಸಲಾಗಿದೆ . ಹಾಂಗ್ ಕಾಂಗ್ ವಿಶೇಷ ಆಡಳಿತ ವಲಯ (ಎಚ್‌ಕೆಎಸ್‌ಎಆರ್) ಸರ್ಕಾರದ ಆರೋಗ್ಯ ಇಲಾಖೆಯ ಆರೋಗ್ಯ ಸಂರಕ್ಷಣಾ ಕೇಂದ್ರ (ಸಿಎಚ್‌ಪಿ) ಪ್ರಕಾರ, ರೋಗಿಗಳು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿದ್ದರು. ಮೂರು ಹೊಸ ಪ್ರಕರಣಗಳಲ್ಲಿ, ಮೊದಲನೆಯದು 62 ವರ್ಷದ ಮಹಿಳೆ, ಅವರು ಜನವರಿ 19 ರಂದು ರೈಲಿನಲ್ಲಿ ಹಾಂಗ್ ಕಾಂಗ್‌ಗೆ ಆಗಮಿಸಿ ಮಾರನೆ ದಿನ ಜ್ವರದ ಬಾದೆಗೆ ಒಳಗಾದರು.ಆಕೆಯೊಂದಿಗೆ ಹಾಂಕಾಂಗ್‌ಗೆ ಬಂದ ಆಕೆಯ ಕುಟುಂಬದ ಮೂವರು ಸದಸ್ಯರು ಯಾವುದೇ ರೋಗಲಕ್ಷಣ ಕಾಣಿಸದಿದ್ದರೂ ಅವರನ್ನು ಲೇಡಿ ಮ್ಯಾಕ್‌ಲೆಹೋಸ್ ಹಾಲಿಡೇ ವಿಲೇಜ್‌ಗೆ ವರ್ಗಾಯಿಸಲಾಯಿತು ಎಂದು ಹೇಳಲಾಗಿದೆ. ಇತರ ಎರಡು ಪ್ರಕರಣಗಳಲ್ಲಿ ಕ್ರಮವಾಗಿ 62 ಮತ್ತು 63 ರ ವುಹಾನ್ ದಂಪತಿಗಳು ಸೇರಿದ್ದಾರೆ.
122 ಪ್ರಕರಣಗಳನ್ನು ಪರೀಕ್ಷೆಯ ನಂತರ ಕೊರೊನಾವೈರಸ್ ಸೋಂಕು ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಿಂದ ಹಿಂತಿರುಗಿದ ನಂತರ ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಎಚ್‌ಕೆಎಸ್‌ಎಆರ್ ಮುಖ್ಯ ಕಾರ್ಯನಿರ್ವಾಹಕ ಕ್ಯಾರಿ ಲ್ಯಾಮ್, ಸಾರ್ವಜನಿಕರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿದ್ದು,. ನ್ಯುಮೋನಿಯಾ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ಶನಿವಾರದ ನಂತರ ನಡೆಯಲಿದೆ ಎಂದರು. ಶಂಕಿತ ಪ್ರಕರಣಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ ವಿಮಾನ ಮತ್ತು ರೈಲ್ವೆ ಮೂಲಕ ಒಳಬರುವ ಪ್ರಯಾಣಿಕರ ಮೇಲೆ ಕಡ್ಡಾಯ ಆರೋಗ್ಯ ಘೋಷಣೆ ನಿಯಮ ಜಾರಿ ಮಾಡಲಾಗಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 