ಕರೋನವೈರಸ್: ಪ್ರಸಕ್ತ ತ್ರೈಮಾಸಿಕದಲ್ಲಿ ಕಚ್ಚಾ ತೈಲ ದರ ಶೇ 66ರಷ್ಟು ಕುಸಿತ, ಒಪೆಕ್ ಒಪ್ಪಂದ ವಿಫಲ
ನ್ಯೂಯಾರ್ಕ್, ಎಪ್ರಿಲ್ 1, ಕರೋನವೈರಸ್ ಸೋಂಕಿನ ಹಿನ್ನೆಲೆಯಲ್ಲಿ ತೈಲ ಅನೇಕ ಉತ್ಪಾದನಾ ಸ್ಥಾವರಗಳನ್ನು ಮುಚ್ಚಲ್ಪಟ್ಟಿರುವುದರಿಂದ ಪ್ರಸಕ್ತ ತ್ರೈಮಾಸಿಕದಲ್ಲಿ ಕಚ್ಚಾ ತೈಲ ದರಗಳಲ್ಲಿ ಶೇ66ರಷ್ಟು ಕುಸಿತ ಕಾಣುವುದರೊಂದಿಗೆ ತೈಲ ಉತ್ಪಾದನೆ ಕಡಿಮೆ ಮಾಡುವ ಮಹತ್ವದ ಒಪೆಕ್ ಒಪ್ಪಂದ ವಿಫಲವಾಗಿದೆ. ಕಚ್ಚಾ ತೈಲ ದರ ನಿಗದಿಪಡಿಸುವ ಜಾಗತಿಕ ಮಾನದಂಡವಾದ ಬ್ರೆಂಟ್, ಮಾರ್ಚ್ ಅಂತ್ಯಕ್ಕೆ ವಹಿವಾಟು ಕೊನೆಗೊಳಿಸುವ ದಿನದಂದು ಶೇ 0.3 ರಷ್ಟು ಕುಸಿದಿದ್ದು ಮಂಗಳವಾರ ಪ್ರತಿ ಬ್ಯಾರೆಲ್ಗೆ 26.37 ಡಾಲರ್ಗೆ ತಲುಪಿದೆ. ತಿಂಗಳಲ್ಲಿ ಇದು ಶೇ 48 ರಷ್ಟು ಕುಸಿದಿದ್ದು, ತ್ರೈಮಾಸಿಕದಲ್ಲಿ ಶೇ 61 ರಷ್ಟು ಕುಸಿದಿದೆ.ಅಮೆರಿಕದ ಕಚ್ಚಾ ತೈಲ ದರ ಮಾಪನ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ ಮಿಡಿಯೆಟ್ (ಡಬ್ಲ್ಯುಟಿಐ) , ದಿನದ ದರವನ್ನು ಶೇ 2 ರಷ್ಟು ಹೆಚ್ಚಿಸಿದ್ದರಿಂದ ಬ್ಯಾರೆಲ್ಲ ದರ 20.48 ಡಾಲರ್ ಗೆ ತಲುಪಿದೆ. ಆದರೂ, ಇದು ತಿಂಗಳಲ್ಲಿ ಶೇ 54ರಷ್ಟು ಮತ್ತು ತ್ರೈಮಾಸಿಕದಲ್ಲಿ ಶೇ 66 ರಷ್ಟು ಕುಸಿದಿದೆ.‘ಇಡೀ ಜಗತ್ತು ಲಾಕ್ಡೌನ್ ಆಗಿರುವುದರಿಂದ ಬೇಡಿಕೆ ಆಘಾತ ಎಷ್ಟು ಕೆಟ್ಟದಾಗಿದೆ ಎಂಬುದನ್ನು ಮಾರುಕಟ್ಟೆಗಳು ಅರ್ಥಮಾಡಿಕೊಳ್ಳಲು ಆರಂಭಿಸುವವರೆಗೆ ಕಚ್ಚಾ ತೈಲದರಗಳ ಕುಸಿತ ಹೀಗೆಯೇ ಮುಂದುವರೆಯಲಿದೆ ಎಂದು ನ್ಯೂಯಾರ್ಕ್ ಮೂಲದ ಆನ್ಲೈನ್ ಟ್ರೇಡಿಂಗ್ ವೇದಿಕೆ, ಕ್ವಾಂಡಾದ ಹಿರಿಯ ವಿಶ್ಲೇಷಕ ಎಡ್ವರ್ಡ್ ಮೊಯಾ ಹೇಳಿದ್ದಾರೆ.