ದುಬೈ ವಿಮಾನ ನಿಲ್ದಾಣದಲ್ಲಿ .... ೧೦ ನಿಮಿಷದಲ್ಲಿ ಕೊರೊನಾ ಪರೀಕ್ಷೆ ....
ದುಬೈ, ಏ ೧೬,ಕೊರೊನಾ ಸೋಂಕು ಹಬ್ಬವುದನ್ನು ತಡೆಗಟ್ಟಲು ಜಗತ್ತಿನೆಲ್ಲೆಡೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ವಿಮಾನಗಳನ್ನು ಏರುವ ಪ್ರಯಾಣಿಕರಿಗೆ ಕೊರೊನಾ ಸೋಂಕು ‘ಇಲ್ಲ’ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇವಲ ೧೦ ನಿಮಿಷಗಳ ಪರೀಕ್ಷೆಯ ವಿಧಾನವನ್ನು ದುಬೈ ಜಾರಿಗೆ ತಂದಿದೆ. ಇತ್ತೀಚಿಗೆ ಕೆಲವು ಅಂತರಾಷ್ಟ್ರೀಯ ವಿಮಾನಗಳಿಗೆ ದುಬೈ ಸರ್ಕಾರ ಅನುಮತಿ ನೀಡಿದೆ. ವಿಮಾನ ಹತ್ತಬೇಕಾದರೆ ವಿದೇಶಿಯರು ಈ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕು. ‘ ಆನ್ ಸೈಟ್ ರಾಪಿಡ್ ಕೋವಿಡ್ ೧೯’ ಹೆಸರಿನಿಂದ ಕರೆಯುವ ಈ ಟೆಸ್ಟ್ ನಲ್ಲಿ ಫಲಿತಾಂಶ ೧೦ ನಿಮಿಷಗಳಲ್ಲಿ ದೊರೆಯಲಿದೆ.ಮತ್ತೊಂದೆಡೆ .. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ಪ್ರಾಧಿಕಾರದ ನೇತೃತ್ವದಲ್ಲಿ ಮೆಗಾ ನಾಗರೀಕ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಈ ಪರೀಕ್ಷೆಗಳನ್ನು ನಡೆಸುತ್ತಿದೆ. ವಿಮಾನ ಯಾನ ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ಎಮಿರೇಟ್ಸ್ ಈ ಸೌಲಭ್ಯವನ್ನು ಜಾರಿಗೆತಂದಿದೆ. ಭಾರತೀಯ ವಿಮಾನ ನಿಲ್ದಾಣಗಳು, ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಈ ಪರೀಕ್ಷಾ ವಿಧಾನವನ್ನು ಅಧ್ಯಯನ ಮಾಡುತ್ತಿದ್ದಾರೆ. ಫಲಿತಾಂಶಗಳ ನಿಖರತೆಯನ್ನು ಪರಿಶೀಲಿಸಿದ ನಂತರ ಭಾರತದಲ್ಲಿ ಈ ವಿಧಾನ ಕಾರ್ಯಗತಗೊಳಿಸಲು ಪ್ರಯತ್ನಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.