ಅಂತರರಾಷ್ಟ್ರೀಯ

ಚೈನಾದಲ್ಲಿ ಮತ್ತೆ ಕೊರೊನಾ ಸಾಂಕ್ರಾಮಿಕ .. ಭಾರತಕ್ಕೂ ಭೀತಿ

ಚೈನಾದಲ್ಲಿ ಮತ್ತೆ  ಕೊರೊನಾ ಸಾಂಕ್ರಾಮಿಕ .. ಭಾರತಕ್ಕೂ ಭೀತಿ

ಬೀಜಿಂಗ್‌, ಅ 23: ನೆರೆಯ   ಚೈನಾದ  ಹಲವು  ಪ್ರದೇಶಗಳಲ್ಲಿ    ಮತ್ತೆ  ಕೊರೊನಾ  ಸಾಂಕ್ರಾಮಿಕ  ಪ್ರಕರಣಗಳು    ಹೆಚ್ಚಾಗಿದ್ದು,  ಸೋಂಕಿತರ  ಪ್ರಮಾಣ   ದಿನ ನಿತ್ಯ    ಹೆಚ್ಚುತ್ತಿದೆ.     ರಾಜಧಾನಿ   ಬೀಜಿಂಗ್‌  ನಲ್ಲಿ  ಐವರಿಗೆ  ಹೊಸದಾಗಿ     ಕೋವಿಡ್‌    ದೃಢಪಟ್ಟಿವೆ ಎಂದು ಆರೋಗ್ಯ  ಇಲಾಖೆಯ  ಮೂಲಗಳು ಹೇಳಿವೆ.

ಕಳೆದ    ಎರಡು  ವಾರಗಳಲ್ಲಿ   ಮಂಗೋಲಿಯಾ, ನಿಂಗ್ ಕ್ಸಿಯಾ ಹುಯಿ, ಶಾಂಕ್ಸಿ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸಿ, ಬೀಜಿಂಗ್​ಗೆ  ಹಿಂದಿರುಗಿದ್ದ   ಐವರಿಗೆ  ಕೋವಿಡ್ ದೃಢ ಪಟ್ಟಿದೆ.   ಮತ್ತೊಬ್ಬ  ವ್ಯಕ್ತಿ   ಸೋಂಕಿತನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು    ಎಂದು   ಮುನ್ಸಿಪಲ್  ಆರೋಗ್ಯ  ಪ್ರಾಧಿಕಾರ ಅಧಿಕಾರಿಗಳು ಹೇಳಿದ್ದಾರೆ.

ಕ್ಸಿಯಾನ್​ ಸೇರಿದಂತೆ ಹಲವಾರು  ನಗರಗಳಿಗೆ ಭೇಟಿ ನೀಡಿದ್ದ  ದಂಪತಿಗೂ  ಸೋಂಕು  ದೃಢಪಟ್ಟಿದೆ. ದಂಪತಿ ನೂರಾರು ಜನರ  ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಅವರ ಪತ್ತೆ ಹಚ್ಚುವಿಕೆ ನಡೆಯುತ್ತಿದೆ. ಹಲವಾರು ನಗರಗಳಲ್ಲಿ ಸಾಮೂಹಿಕ   ಕೊರೊನಾ  ಪರೀಕ್ಷೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಚೈನಾ ತನ್ನ  ಜನಸಂಖ್ಯೆಯ ಶೇ  75   ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೈನಾದಲ್ಲಿ  ಕೊರೊನಾ     ಹೆಚ್ಚುತ್ತಿರುವ   ಹಿನ್ನಲೆಯಲ್ಲಿ   ಭಾರತಕ್ಕೂ  ಭೀತಿ ಹೆಚ್ಚಾಗಿದೆ.     ದೇಶದಲ್ಲಿ  ಇತ್ತೀಚಿಗೆ  ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು,  ಮತ್ತೆ  ಸಂಕಷ್ಟ   ಎದುರಾಗುವ ಸಾಧ್ಯತೆಯಿದೆ.   ಜನರು ಕೋವಿಡ್‌  ಶಿಷ್ಟಾಚಾರಗಳನ್ನು  ಕಟ್ಟುನಿಟ್ಟಾಗಿ ಪಾಲಿಸಬೇಕು   ತಜ್ಞರು  ಜನರನ್ನು ಎಚ್ಚರಿಸುತ್ತಿದ್ದಾರೆ.


ಸುದ್ದಿ ಓದಿ