ಅಂತರರಾಷ್ಟ್ರೀಯ

ಅಮೆರಿಕದಲ್ಲಿ 10 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ

ಅಮೆರಿಕದಲ್ಲಿ 10 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ

ವಾಷಿಂಗ್ಟನ್: ಮೇ 18: ಅಮೆರಿಕದಲ್ಲಿ ಕೊರೊನಾ ವೈರಸ್ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ ಅಧಿಕೃತವಾಗಿ ಒಂದು ಮಿಲಿಯನ್ (10 ಲಕ್ಷ) ಗಡಿಯನ್ನು ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಬುಧವಾರ ಹೇಳಿದೆ. ವಿಶ್ವವಿದ್ಯಾನಿಲಯದ ಪ್ರಕಾರ, ಅಮೆರಿಕದಲ್ಲಿ ಪ್ರಸ್ತುತ ಸಾವಿನ ಸಂಖ್ಯೆ 10,00,167 ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆ 8,27,20,354 ಆಗಿದೆ.

“ಜಾನ್ಸ್ ಹಾಪ್ಕಿನ್ಸ್ ಕರೋನಾ ವೈರಸ್ ಸಂಪನ್ಮೂಲ ಕೇಂದ್ರದ ಮಾಹಿತಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಅಧಿಕೃತವಾಗಿ ಇಂದು ಒಂದು ಮಿಲಿಯನ್ ಕೋವಿಡ್ ಬಾಧಿತರು ಮೃತಪಟ್ಟಿದ್ದಾರೆಂದು ವರದಿ ಮಾಡಿದೆ” ಎಂದು ವಿಶ್ವವಿದ್ಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.

33 ಕೋಟಿ ಜನಸಂಖ್ಯೆಯಲ್ಲಿ 80 ದಶಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ಯುಎಸ್ ದಾಖಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜನವರಿ 20, 2020 ರಂದು ಚೀನಾದ ವುಹಾನ್‌ನಿಂದ ಸಿಯಾಟಲ್‌ಗೆ ವ್ಯಕ್ತಿಯೊಬ್ಬ ಆಗಮಿಸಿದಾಗ ಮೊದಲ ಪ್ರಕರಣ ದೃಢಪಟ್ಟ ಬಗ್ಗೆ ವರದಿಯಾಗಿತ್ತು.

ಸುದ್ದಿ ಓದಿ