ಒಮಾನಿನಲ್ಲಿ ಕರೋನ ಪೀಡಿತರ ಸಂಖ್ಯೆ 82,050ಕ್ಕೆ ಏರಿಕೆ
ಮಸ್ಕತ್,
ಆಗಸ್ಟ್ 12: ಒಮಾನಿನಲ್ಲಿ ಕರೋನ ಸೋಂಕು ಪ್ರಕರಣಗಳ
ಸಂಖ್ಯೆ 82,050 ಕ್ಕೆ ತಲುಪಿದೆ ಎಂದು
ಒಮಾನಿ ಆರೋಗ್ಯ ಸಚಿವಾಲಯ ಮಂಗಳವಾರ
ಪ್ರಕಟಿಸಿದೆ.
ಇದೇ ವೇಳೆ ಕರೋನ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳ ಸಂಖ್ಯೆ 76,720 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 533 ಕ್ಕೆ ತಲುಪಿದೆ ಎಂದೂ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ರಷ್ಯಾದ ಕೋವಿಡ್ -19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಒಮಾನ್ ಯೋಜಿಸಿದೆ ಎಂಬ ಪತ್ರಿಕಾ ವರದಿಯನ್ನು ಒಮಾನಿ ಆರೋಗ್ಯ ಸಚಿವ ಅಹ್ಮದ್ ಅಲ್ ಸೈದಿ ಮಂಗಳವಾರ ನಿರಾಕರಿಸಿ, ಈ ಹೇಳಿಕೆ ಆಧಾರರಹಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.