ರಬಾಕಾವಿಬನಹಟ್ಟಿ

ಕೋರೊನಾ ನಿರ್ವಹಣೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲ : ಉಮಾಶ್ರೀ

ಕೋರೊನಾ ನಿರ್ವಹಣೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲ : ಉಮಾಶ್ರೀ

ರಬಕವಿ-ಬನಹಟ್ಟಿ : ಕೋರೊನಾ ಮಹಾಮಾರಿಯ ಎರಡನೆಯ ಅಲೆಯು ಜನರ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಕೇಂದ್ರ ಸರಕಾರ ವ್ಯಾಕ್ಸಿನ ತಯಾರಿಸಲು ತುಂಬಾ ವಿಳಂಬವಾಗಿ ಕಾರ್ಯನಿರ್ವಹಿಸಿದ್ದು, ಜನರನ್ನು ಕರೋನಾ ಸೋಂಕಿಗೆ ಒಳಗಾಗುವಂತೆ ಮಾಡಿದೆ. ಭಾರತ ದೇಶದ ಜನಸಂಖ್ಯೆಯ ಕೇವಲ ಶೇ. 3 ರಷ್ಟು ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದು, ಇದೆ ರೀತಿ ವಿಳಂಬವಾದರೆ ಕೋರೊನಾ ಮೂರನೆಯ ಅಲೆ ಬರಲು ಸಾಧ್ಯವಾಗಬಹುದು. ಕೋರೊನಾ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿವೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ರಬಕವಿಯ ಶಿವದಾಸಿಮಯ್ಯ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಮಾಶ್ರೀ, ಕೋರೊನಾದ ಅಲೆಯನ್ನು ಸಮರೋಪಾದಿಯಲ್ಲಿ ಸರಕಾರ ತಡೆಗಟ್ಟಬಹುದಾಗಿತ್ತು. ವ್ಯಾಕ್ಸಿನ್ ಹಾಕಿಸಲು ಸರಕಾರಗಳು ವಿಳಂಬ ನೀತಿಯನ್ನು ಅನುಸರಿಸುತ್ತಿವೆ. ವ್ಯಾಕ್ಸಿನ್ನ ಕಳ್ಳತನದಿಂದ ಮಾರಾಟವಾಗುತ್ತಿದೆ, ದುಪ್ಪಟು ಹಣಕ್ಕೆ ವ್ಯಾಕ್ಸಿನ್ ಮಾರಾಟವಾಗುತ್ತಿದ್ದು, ಉಳ್ಳವರಿಗೆ ಸುಲಭವಾಗಿ ಸಿಗುವಂತೆ ಮಾಡಿದ್ದಾರೆ. ಕರೋನಾ ಸಂಕಷ್ಟದಲ್ಲಿರುವ ಅನುದಾನ ರಹಿತ ಶಿಕ್ಷಕರಿಗೆ ಸರಕಾರ ಸೌಲಭ್ಯ ನೀಡಬೇಕಾಗಿದ್ದು, ಅವರನ್ನು ಕಡೆಗಣಿಸಿದ್ದುದ್ದು ಮಲತಾಯಿ ಧೋರಣೆಯಾಗಿದೆ ಎಂದರು.

ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಕಾಂಗ್ರೆಸ್ ಮುಖಂಡರಾದ ಲಕ್ಷಣ ದೇಸಾರಟ್ಟಿ, ನೀಲಕಂಠ ಮುತ್ತೂರ, ರಾಜೇಂದ್ರ ಭದ್ರನ್ನವರ, ನಗರಸಭಾ ಸದಸ್ಯ ಬಸವರಾಜ ಗುಡೋಡಗಿ, ಚಿದಾನಂದ ಗಾಳಿ, ಸತ್ಯಪ್ಪ ಮೇಣಿ, ಸಂಗಪ್ಪ ಕುಂದಗೋಳ, ಶಂಕರ ಜಾಲಿಗಿಡದ, ಈಶ್ವರ ಚಮಕೇರಿ, ದಾನಪ್ಪ ಹುಲಜತ್ತಿ, ರಾಹುಲ ಕಲಾಲ, ಕಿರಣ ಕರಲಟ್ಟಿ, ಪಿಂಟು ಕುಂಬಾರ ಸೇರಿದಂತೆ ಅನೇಕರಿದ್ದರು.




 

ಸುದ್ದಿ ಓದಿ