ಅಂತರರಾಷ್ಟ್ರೀಯ

ಚೀನಾದಲ್ಲಿ ಮತ್ತೆ ಕೊರೊನಾ ಲಾಕ್ ಡೌನ್!

ಚೀನಾದಲ್ಲಿ ಮತ್ತೆ  ಕೊರೊನಾ ಲಾಕ್ ಡೌನ್!

ಬೆಂಗಳೂರು, ಅ 14: ಚೀನಾದಲ್ಲಿ ಮತ್ತೆ ಕೋವಿಡ್ ಉಲ್ಬಣಿಸತೊಡಗಿದೆ. ಉಯ್ಘುರು ಸಮುದಾಯದ ಜನ ಹೆಚ್ಚು ವಾಸಿಸುವ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಕೊರೊನಾ ಮತ್ತಷ್ಟು ತೀವ್ರಗೊಂಡಿದೆ. ಇದರಿಂದ ಹೆಚ್ಚು ಭೀತಿಗೊಳಗಾಗಿರುವ ಚೀನಿ ಅಧಿಕಾರಿಗಳು ಅಲ್ಲಿ ಲಾಕ್ ಡೌನ್ ಹೇರಿದ್ದಾರೆ.

ಕ್ಸಿನ್ ಜಿಯಾಂಗ್ ಪ್ರಾಂತ್ಯದ ಉತ್ತರ ಭಾಗದಲ್ಲಿರುವ ಗುಲ್ಜಾ ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್-19 ರೋಗಿಗಳ ಸಂಖ್ಯೆಯಿಂದಾಗಿ ಉಯ್ಘುರ್ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಸ್ಥಳೀಯ ಚೀನಿ ಅಧಿಕಾರಿಗಳು, ಅಕ್ಟೋಬರ್ 3ರಿಂದ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದಾರೆ ಅಂತಾ ರೇಡಿಯೋ ಫ್ರೀ ಏಷಿಯಾ ವರದಿ ಮಾಡಿದೆ. 

ಸ್ಥಳೀಯರ ಹೇಳಿಕೆ ಪ್ರಕಾರ, ಅವರ ಮನೆ ಬಾಗಿಲುಗಳನ್ನು ಲಾಕ್ ಮಾಡಿ, ಸೀಲ್ ಹಾಕಲಾಗಿದೆ. ಕಳೆದ ಕೆಲವು ದಿನಗಳಿಂದ ಮನೆಯಲ್ಲೇ ಕುಳಿತು ಕಾಲ ಕಳೆಯುತ್ತಿದ್ದೇವೆ. ದಿಢೀರ್ ಅಂತಾ ಅಧಿಕಾರಿಗಳು ಲಾಕ್ ಡೌನ್ ಹೇರಿದ್ದರಿಂದ ಮನೆಯಿಂದ ಹೊರ ಹೋಗಲು ಹಾಗೂ ದಿನಸಿ ವಸ್ತುಗಳನ್ನು ಖರೀದಿ ಮಾಡಲು ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಎಂದು ರೇಡಿಯೋ ಫ್ರೀ ಏಷಿಯಾ ತಿಳಿಸಿದೆ. 

ಅಲ್ಲದೆ, ಕಳೆದ ವಾರ ಚೀನಾದ ಫ್ಯುಜಿಯಾನ್ ಪ್ರಾಂತ್ಯದಲ್ಲಿ ಕ ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಆ ಪ್ರದೇಶದಲ್ಲಿ ಲಾಕ್ ಡೌನ್ ಹೇರಲಾಗಿದೆ. ಸುಮಾರು 150ಕ್ಕೂ ಹೆಚ್ಚು ಜನರಲ್ಲಿ ಕ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಕೋವಿಡ್ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಚೀನಾ ಮುಖವಾಣಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಸುದ್ದಿ ಓದಿ