ಜಾರ್ಜಿಯಾದಲ್ಲಿ ಕೊರೊನಾ 5ನೇ ಅಲೆ ಆರ್ಭಟ...!
ಟಿಬಿಲಿಸಿ, ಅ 18 - ಜಾರ್ಜಿಯಾದಲ್ಲಿ ಕೊರೊನಾ ಸಾಂಕ್ರಾಮಿಕ ಆರ್ಭಟಿಸುತ್ತಿದೆ. ಕೊರೊನಾ ಐದನೇ ಅಲೆ ವ್ಯಾಪಿಸುತ್ತಿದೆ ಎಂದು ಜಾರ್ಜಿಯನ್ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪಬ್ಲಿಕ್ ಹೆಲ್ತ್ (NCDC) ಮುಖ್ಯಸ್ಥ ಅಮಿರನ್ ಗಮ್ ಕ್ರೆಲಿಡ್ಜ್ ಭಾನುವಾರ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಐದನೇ ಅಲೆ ಆರಂಭವಾಗಿದ್ದು, ಇದು ನಿರೀಕ್ಷೆಗಿಂತ ಹೆಚ್ಚು ಗಂಭೀರ ಮಟ್ಟದಲ್ಲಿ ವ್ಯಾಪಿಸುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಸೋಂಕು ರೋಗಗಳು ತೀವ್ರವಾಗಿ ವೃದ್ದಿಸುತ್ತಿದೆ. ಪ್ರಸ್ತುತ, ದೇಶದಲ್ಲಿ ನಿತ್ಯ 4,000 ಪ್ರಕರಣಗಳು ದಾಖಲಾಗುತ್ತಿವೆ. ಕೊರೊನಾ ನಿಗ್ರಹಿಸಲು ಜನರು ಲಸಿಕೆ ತೆಗೆದು ಕೊಳ್ಳಬೇಕು, ಮುಖಗವುಸು ಕಡ್ಡಾಯವಾಗಿ ಧರಿಸಬೇಕು ಮನವಿ ಮಾಡಿದ್ದಾರೆ.
ಕೊರೊನಾ ಕೊನೆಗೊಳಿಸಲು ಲಸಿಕೆ, ಮಾಸ್ಕ್ ಸೂಕ್ತವಾದ ಆಯುಧಗಳು ಎಂದು ಅವರು ಹೇಳಿದ್ದಾರೆ. ಜಾರ್ಜಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 4,581 ಮಂದಿ ಸೋಂಕಿಗೆ ಒಳಗಾಗಿದ್ದು, ಈವರೆಗೆ 6,62,334 ಮಂದಿ ಸೋಂಕಿನಿಂದ ತೊಂದರೆಗೊಳಗಾಗಿದ್ದಾರೆ