‘ಸಹಕಾರಿ ಬ್ಯಾಂಕ್ದಿಂದ ಜನಸಾಮಾನ್ಯರ ಬದುಕಿಗೆ ಆಸರೆ’
ಇನಾಂಹೊಂಗಲ (ತಾ.ಸವದತ್ತಿ) : ಹಿರಿಯ ಸಹಕಾರಿ ಧುರೀಣ ಡಾ. ವ್ಹಿ. ಎಸ್. ಸಾಧೂನವರ ನೇತೃತ್ವದ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ಸಹಕಾರಿ ಸೌಹಾರ್ದ ಬ್ಯಾಂಕ್ ಲಾಭದಲ್ಲಿ ಮುನ್ನಡೆಯುತ್ತಿದ್ದು, ವಿವಿಧ ಸಾಲಸೌಲಭ್ಯಗಳ ಮೂಲಕ ಜನಸಾಮಾನ್ಯರ ಬದುಕಿಗೆ ಆಸರೆ ಒದಗಿಸಿದೆ ಎಂದು ಬ್ಯಾಂಕಿನ ನೂತನ ಸಿ.ಇ.ಓ. ಈರಣ್ಣ ನಾನಣ್ಣವರ ಹೇಳಿದರು.
ಅವರು ಸವದತ್ತಿ ತಾಲೂಕು ಇನಾಂಹೊಂಗಲ ಗ್ರಾಮದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪ್ರಗತಿ ಪರೀಶೀಲನೆ ನಡೆಸಿದ ಸಂದರ್ಭದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಕೃಷಿ ಬೆಳವಣಿಗೆಗಾಗಿ ಚಿಕ್ಕ ಹಿಡುವಳಿದಾರರಿಗೆ, ಕಿರಾಣಿ ಸೇರಿದಂತೆ ವಿವಿಧ ಸಣ್ಣ ವ್ಯಾಪಾರಸ್ಥರಿಗೆ ಹಲವು ರೀತಿಯ ಸಾಲಗಳನ್ನು ಸುಲಭ ಬಡ್ಡಿ ದರದಲ್ಲಿ ಕೊಡಮಾಡಲಾಗಿದೆ ಎಂದೂ ಅವರು ಹೇಳಿದರು.
ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕ ಮಲ್ಲನಾಯ್ಕ ಪಾಟೀಲ, ಇನಾಂಹೊಂಗಲ ಶಾಖೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ, ಚಂದ್ರು ಕಡಗದ, ಚಂದ್ರಶೇಖರ ಕಾಮನಬೂದಿ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ನೂತನ ಸಿ.ಇ.ಓ. ಅವರನ್ನು ಸನ್ಮಾನಿಸಿದರು.