ಶೀಘ್ರವೇ ಮತ್ತಷ್ಟು ಗಗನಮುಖಿಯಾಗಲಿರುವ ಅಡುಗೆ ಎಣ್ಣೆ
ಜಕಾರ್ತಾ: ಏಪ್ರಿಲ್ 26: ಶೀಘ್ರದಲ್ಲೇ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದಾಗಿ ಅಡುಗೆ ಎಣ್ಣೆ ಗಗನಮುಖಿಯಾಗಿದ್ದು ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ವಿಶ್ವದ ಅತಿದೊಡ್ಡ ಅಡುಗೆ ಎಣ್ಣೆ ರಫ್ತುದಾರರಾದ ಇಂಡೋನೇಷ್ಯಾ ಏಪ್ರಿಲ್ 28 ರಿಂದ ತಾಳೆ ಎಣ್ಣೆ ರಫ್ತನ್ನು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ದೇಶೀಯ ಕೊರತೆಯ ಹೆಚ್ಚಳದ ಕಾರಣದಿಂದ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತನ್ನು ನಿಲ್ಲಿಸಲಿದೆ.
ವಿಶ್ವದಲ್ಲೇ ಅತೆಹೆಚ್ಚು ತಾಳೆ ಎಣ್ಣೆ ರಫ್ತು ದಾರರಾಗಿ ಇಂಡೋನೇಷ್ಯಾ ಪ್ರಥಮ ಸ್ಥಾನದಲ್ಲಿದೆ. ನಂತರ ಮಲೇಷ್ಯಾ ಎರಡನೇ ಸ್ಥಾನದಲ್ಲಿದೆ. ಭಾರತವು ಇಂಡೋನೇಷ್ಯಾದಿಂದ ಅತಿ ಹೆಚ್ಚು ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುವ ದೇಶವಾಗಿದೆ. ಹೀಗಾಗಿ ತಾಳೆಎಣ್ಣೆ ರಫ್ತು ಸ್ಥಗಿತದಿಂದ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಹೆಚ್ಚಲಿದೆ.
ಭಾರತವಷ್ಟೇ ಅಲ್ಲದೇ ಚೀನಾ ಕೂಡ ಇಂಡೋನೇಷ್ಯಾದ ತಾಳೆ ಎಣ್ಣೆಯನ್ನ ಹೆಚ್ಚು ಆಮದು ಮಾಡಿಕೊಳ್ಳಲಿದೆ