ಮುಂಡರಗಿ

ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ

ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ

ಮುಂಡರಗಿ :ರಾಜ್ಯದಲ್ಲಿ ಸಿದ್ದರಾಮಯ್ಯನವರ ಆಡಳಿತ ಇದ್ದಾಗ ರೈತರ ದಿನದಲಿತರ, ಬಡವರ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಈ ಭಾಗದ ಬರದ ನಾಡಿಗೆ ನೂರಾರು ಕೋಟಿ ಅನುದಾನ ತಂದು ಸಿಂಗಟಾಲೂರ ಏತ ನೀರಾವರಿ ಯೋಜನೆ ಮೂಲಕ ಹಲವು ಕೆರೆಗಳನ್ನು ಮತ್ತು ಬಾಂದಾರಗಳನ್ನು ನಿರ್ಮಿಸಿ ಬರ್ತಿ ಮಾಡಿದರ ಫಲವಾಗಿ ರೈತರ ಕೂಲಿಕಾರ್ಮಿಕರ ಕಷ್ಟಗಳನ್ನು ದೂರುಮಾಡಲಾಗಿದೆ ಬರಗಾಲದ ಸಮಸ್ಯೆಯಿಂದ ಸಾಲದ ಸುಳಿಯಿಂದ ಹೊರಬರುವಂತೆ ಕಾಂಗ್ರೆಸ್ ಪಕ್ಷ ಹಾಕಿಕೊಂಡ ಯೋಜನೆಗಳು ಇಂದು ಸಹಕಾರಿಯಾಗಿದೆ ಎಂದು ಮಾಜಿ ಶಾಸಕ ಜಿ.ಎಸ್.ಪಾಟೀಲರು ಹೇಳಿದರು.

  ತಾಲೂಕಿನ ಡಂಬಳ ಹೋಬಳಿಯ ಚುರ್ಚಿಹಾಳ ಗ್ರಾಮದಲ್ಲಿ ಕಾಂಗ್ರೇಸ್ ಗೃಹಲಕ್ಷ್ಮಿ 2ಸಾವಿರ ಮತ್ತು 200 ಯುನಿಟನ ಗೃಹಜ್ಯೋತಿ ಗ್ಯಾರಂಟಿ ಕಾರ್ಡ್  ಮಹಿಳೆಯರಿಗೆ ವಿತರಿಸಿ ಮತ್ತು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನೂರಾರು ಯುವಕರು ಮತ್ತು ಮಹಿಳೆಯರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

 ನಮ್ಮ ಸರಕಾರ ಇದ್ದಾಗ ಕೃಷಿಭಾಗ್ಯ, ಕ್ಷೀರಭಾಗ್ಯ, ಅನ್ನಭಾಗ್ಯ, ಮಾತೃಪೂರ್ಣ, ಸೇರಿದಂತೆ ಚುನಾವಣೆಯ ಪೂರ್ವದಲ್ಲಿ ನೀಡಿದ 165 ಭರವಸೆಗಳಲ್ಲಿ 158ಬರವಸೆಗಳನ್ನು ಇಡೆರಿಸಿ ಕಪ್ಪಚುಕ್ಕೆ ಇಲ್ಲದಂತೆ ನುಡಿದಂತೆ ಆಡಳಿತ ನಡೆಸಿರುವುದು ಕಾಂಗ್ರೆಸ್ ಪಕ್ಷವಾಗಿದೆ ಎಂದು ಹೇಳಿದರು. ಅತಿ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿ ಬಂದು ನೆಲೆಸುವಂತಹ ವಾತವರಣ ಸೃಷ್ಟಿಸಿ ಯುವಕರಿಗೆ ಉದ್ಯೋಗ ನೀಡುವಂತಹ ಕೆಲಸ ಕಾಂಗ್ರೇಸ್ ಪಕ್ಷ ಮಾಡಿದೆ ಎಂದು ಹೇಳಿದರು.

  ಬಿಜೆಪಿ ಪಕ್ಷ ತೋರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದವರು ಫಕೀರಪ್ಪ ನಂದಿಹಳ್ಳಿ, ಗಂಗಾಧರ ಗದಗಿನಮಠ, ವಿರೇಶ ಭೂಸನೂರಮಠ, ಪುಟ್ಟರಾಜ ನಂದಿಹಳ್ಳಿ, ಸಂಗನಗೌಡ ಹುಚ್ಚನಗೌಡ, ಮಹೇಶ ತಳವಾರ, ವಿಶ್ವನಾಥ ಹಿರೇಮಠ, ರುದ್ರಮುನಿ ಹಿರೇಮಠ, ಹೇಮಂತ ಕವಲೂರ, ಲೋಕೇಶ ಗದಗಿನಮಠ, ಪ್ರಭು ಪಾಟೀಲ್, ನವೀನ ಕವಲೂರ, ಮುತ್ತಪ್ಪ ಚಂಡೂರಮಠ, ಪುನಿತ ಗಾವರವಾಡ, ಶೇಕರಯ್ಯ ಗದಗಿನಮಠ, ಮೇಲಪ್ಪ ದೊಡ್ಡಮನಿ, ದುರಗಪ್ಪ ಚವಡಿ, ಕುಮಾರ ವಿರಾಪೂರ, ಸಿದ್ದಲಿಂಗ ಭೂಸನೂರಮಠ, ಮಲ್ಲಪ್ಪ ಓಲಿ, ರಾಮಪ್ಪ ಹರಿಣಸಿಕಾರಿ, ಶಿವನಂದಯ್ಯ ಆರ್ ಗದಗಿನ, ಅಶೋಕಪ್ಪ ಕವಲೂರ, ಸೇರಿದಂತೆ ನೂರಾರು ಯುವಕರು ಹಾಗೂ ಮಹಿಳೆಯರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.

  ಕಾರ್ಯಕ್ರಮದಲ್ಲಿ ಮುಂಡರಗಿ ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಿ.ಡಿ.ಮೋರನಾಳ, ಹಾಲಪ್ಪ ಹತರ್ಿ, ಶಿವಕುಮಾರಸ್ವಾಮಿ ಹಿರೇಮಠ, ಯೂಸಫ್ ಈಟಿ, ಕಾರ್ಮಿಕರ ಸಂಘದ ಅಧ್ಯಕ್ಷ ಮಹೇಶ, ಶರಣಪ್ಪ ಶಿರುಂದ, ಸುರ್ಯಕಾಂತ ಕವಲೂರ, ಹಾಲಪ್ಪ ಹರ್ತಿ, ವಿಶ್ವನಾಥ ಪಾಟೀಲ್, ಶಿವು ವಿ ಕವಲೂರ, ಶ್ರೀಕಾಂತ ರಾಯರೆಡ್ಡಿ, ಫರಶುರಾಮ ಹುಬ್ಬಳ್ಳಿ, ಲಕ್ಷ್ಮಣ ಪೂಜಾರ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಊರಿನ ಹಿರಿಯರು ಯುವಕರು ಇದ್ದರು.   


ಸುದ್ದಿ ಓದಿ