ಕ್ರೀಡೆ

ಕಾಮನ್ ವೆಲ್ತ್ ಗೇಮ್ಸ್ 2022; ಭಾರತಕ್ಕೆ ಚಿನ್ನ ತಂದುಕೊಟ್ಟ ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ

ಕಾಮನ್ ವೆಲ್ತ್ ಗೇಮ್ಸ್ 2022; ಭಾರತಕ್ಕೆ ಚಿನ್ನ ತಂದುಕೊಟ್ಟ ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನ್ನುಂಗಾ

ಬರ್ಮಿಂಗ್ ಹ್ಯಾಮ್: ಜುಲೈ 31: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಲಭಿಸಿದೆ. ಪುರುಷರ 67 ಕೆಜಿ ವಿಭಾಗದಲ್ಲಿ ಜೆರೆಮಿ ಲಾಲ್ರಿನ್ನುಂಗಾ ಚಿನ್ನ ಗೆದ್ದಿದ್ದಾರೆ. ಈ ಮೂಲಕ 2022 ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್ ಕ್ರೀಡಾಯಿಂದ ಪದಕದ ಓಟ ಮುಂದುವರೆದಿದೆ.

ಮೀರಾಬಾಯಿ ಚಾನು ನಂತರ ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದೆ. ಜೆರೆಮಿ ಅವರು ಸ್ನಾಜ್ ನಲ್ಲಿ 140 ಕೆಜಿ, ಕ್ಲೀನ್ ಅಂಡ್  ಜರ್ಕ್ ನಲ್ಲಿ 160 ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ದಾಖಲೆಯನ್ನು ನಿರ್ಮಿಸಿದರು. ಅವರು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಒಟ್ಟು 300 ಕೆಜಿ ಎತ್ತುವ ಮೂಲಕ ಹೊಸ ದಾಖಲೆ ಬರೆದರು.

ಮೂರನೇ ಪ್ರಯತ್ನದಲ್ಲಿ 165 ಕೆಜಿ ಎತ್ತಲು ಅವರು ಬಯಸಿದ್ದರು.  ಆದರೆ ಅಂತಿಮ ಪ್ರಯತ್ನದ ಕೊನೆಯಲ್ಲಿ ಗಾಯಗೊಂಡು ಪೂರ್ಣಗೊಳಿಸಲು ವಿಫಲರಾದರು. ಸಮೋವಾದ ಅನುಭವಿ ಲಿಫ್ಟರ್ ವೈಪವಾ ಐಯೋನೆ 293 ಕೆಜಿಯಷ್ಟು ಭಾರ ಎತ್ತುವ ಮೂಲಕ ಬೆಳ್ಳಿ ಗೆದ್ದರೆ, ನೈಜೀರಿಯಾದ ಎಡಿಡಿಯಾಂಗ್ ಉಮೊಫಿಯಾ 290 ಕೆಜಿಯೊಂದಿಗೆ ಕಂಚಿನ ಪದಕ ಪಡೆದರು.

ಮಿಜೋರಾಂನ ಐಜ್ವಾಲ್‌ ಮೂಲದ 19 ವರ್ಷ ವಯಸ್ಸಿನ ಜೆರೆಮಿ ಲಾಲ್ರಿನ್ನುಂಗಾ  2018 ರ ಯೂತ್ ಒಲಿಂಪಿಕ್ ಗೇಮ್ಸ್ ನಲ್ಲಿ 62 ಕೆಜಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು ಮತ್ತು ಕಳೆದ ವರ್ಷ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ 67 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ಸುದ್ದಿ ಓದಿ