ಕಾಮನ್ ವೆಲ್ತ್ ಗೇಮ್ಸ್; 10,000 ಮೀ. ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಪ್ರಿಯಾಂಕಾ ಗೋಸ್ವಾಮಿ
ಬರ್ಮಿಂಗ್ ಹ್ಯಾಮ್: ಆಗಸ್ಟ್ 06 : ಕಾಮನ್ವೆಲ್ತ್ ಗೇಮ್ಸ್ ನಲ್ಲಿ 10,000 ಮೀಟರ್ ಮಹಿಳೆಯರ ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ನಡಿಗೆ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಿಯಾಂಕಾ ಗೋಸ್ವಾಮಿ ಶನಿವಾರ ಇತಿಹಾಸ ಬರೆದಿದ್ದಾರೆ.
ಪ್ರಿಯಾಂಕ 42:34.30 ಸಮಯದಲ್ಲಿ ತಮ್ಮ ಸ್ಪರ್ಧೆ ಪೂರ್ಣಗೊಳಿಸಿದರು. ಕೀನ್ಯಾದ ಎಮಿಲಿ ವಾಮುಸಿ ಎನ್ಗಿ (43:50.86) ಕಂಚು ಪಡೆದರು. ಸ್ಪರ್ಧೆಯಲ್ಲಿದ್ದ ಇತರ ಭಾರತೀಯರಾದ ಭಾವನಾ ಜಾಟ್ 47:14.13 ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಎಂಟನೇ ಮತ್ತು ಕೊನೆಯ ಸ್ಥಾನ ಪಡೆದರು.
2010 ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದ ಮೊದಲ ಭಾರತೀಯ ಹರ್ಮಿಂದರ್ ಸಿಂಗ್ ಅವರನ್ನು ಇಲ್ಲಿ ಸ್ಮರಿಸಬಹುದು.