ಹುಕ್ಕೇರಿ

ಬಿಜೆಪಿ ಆಡಳಿತದಿಂದ ಜನ ಸಾಮಾನ್ಯರ ಬದುಕು ದುಸ್ಥರ: ಎ ಬಿ ಪಾಟೀಲ

ಬಿಜೆಪಿ ಆಡಳಿತದಿಂದ ಜನ ಸಾಮಾನ್ಯರ ಬದುಕು ದುಸ್ಥರ: ಎ ಬಿ ಪಾಟೀಲ

ಹುಕ್ಕೇರಿ 01: ಭಾರತೀಯ ಜನತಾ ಪಕ್ಷದ ಆಡಳಿತದಿಂದ ಸಾಮಾನ್ಯ ಜನರ ಜೀವನ ದುಸ್ಥರವಾಗಿದೆ ಎಂದು ಮಾಜಿ ಸಚಿವ ಎ ಬಿ ಪಾಟೀಲ ಹೇಳಿದರು. ಅವರು ಇಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಬಿಜೆಪಿ ಸರ್ಕಾರ ದಿನ ನಿತ್ಯದ ಅಗತ್ಯ ವಸ್ತುಗಳಾದ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಬೆಳೆಕಾಳುಗಳುಗಳಿಂದ ಉಪ್ಪಿನವರಗೆ ಬೆಲೆಗಳನ್ನು ಹೆಚ್ಚಿಸಿ ಬಡವರ, ದಿನ ದಲಿತರ, ಕೂಲಿಕಾರರ ಮತ್ತು ಮದ್ಯಮ ವರ್ಗದ ಜನರ ಬದುಕು ದುಸ್ಥರಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ, ಹುಕ್ಕೇರಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೆ ಎಂದು ಘೋಷಣೆ ಮಾಡಿದರು.  

ಅಲ್ಲದೆ ಮಾರ್ಚ 2 ರಂದು ಹುಕ್ಕೇರಿ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ಜರಗಲಿರುವ ಪ್ರಜಾದ್ವನಿ ಯಾತ್ರೆಗೆ ಸುಮಾರು 20 ಸಾವಿರ ಜನ ಭಾಗಿಯಾಗಲಿದ್ದಾರೆ ಎಂದರು      

 ಹುಕ್ಕೇರಿ ಬ್ಲಾಕ್ ಅಧ್ಯಕ್ಷ ವಿಜಯ ರವದಿ, ಸಂಕೇಶ್ವರ ಬ್ಲಾಕ್ ಅಧ್ಯಕ್ಷ ಸಂತೋಷ ಮುಡಸಿ, ಮಹಿಳಾ ಅಧ್ಯಕ್ಷೆ ರೇಖಾ ಚಿಕ್ಕೋಡಿ, ಮುಖಂಡರಾದ ಬಸವರಾಜ ಪಾಟೀಲ, ವೃಷಭ ಪಾಟೀಲ, ಶಾನೂಲ ತಹಶಿಲ್ದಾರ, ರಾಜು ಸಿದ್ನಾಳ, ಕರುಣಾಕರ ಶೆಟ್ಟಿ, ಚಂದು ಗಂಗಣ್ಣವರ, ಗವಿಶ ರವದಿ ಮೊದಲಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ