ಯುದ್ದ ಭೂಮಿಯಲ್ಲಿ ಒಂಟಿಯಾಗಿ 11 ವರ್ಷದ ಬಾಲಕ, ರಿಯಲ್ ಹೀರೋ ಎಂದು ಕಮೆಂಟ್
ಉಕ್ರೇನ್ 07 : ಉಕ್ರೇನ್‌ನ ಝಪೊರಿಜಿಯಾ ಪ್ರದೇಶದ 11 ವರ್ಷದ ಬಾಲಕ ಯುದ್ಧಭೂಮಿಯಲ್ಲಿ ಏಕಾಂಗಿಯಾಗಿ ಸಾವಿರ ಕಿಲೋಮೀಟರ್ ಪ್ರಯಾಣಿಸಿದ್ದಾನೆ.ಈ ಹುಡುಗನನ್ನು ಉಕ್ರೇನ್‌ನ ವಿದೇಶಾಂಗ ಸಚಿವರು “ದಿ ಬಿಗ್ಗೆಸ್ಟ್ ಹೀರೋ ಆಫ್ ಲಾಸ್ಟ್ ನೈಟ್” ಎಂದು ಬಣ್ಣಿಸಿದ್ದಾರೆ.ಒಂದು ಫೋಲ್ಡರ್ ಬ್ಯಾಗ್ ನಲ್ಲಿ ಟೆಲಿಫೋನ್ ನಂಬರ್, ಪಾಸ್ ಪೋರ್ಟ್ ಮತ್ತು ತಿನ್ನಲು ಆಹಾರವಿರುವ ಪೇಪರ್ ಬ್ಯಾಗ್ ಇಟ್ಟು ಹುಡುಗನ ಹೆಗಲ ಮೇಲೆ ಹಾಕಿ ಇನ್ನು ಹೊರಡು ಎಂದು ಆ ಬಾಲಕನ ತಾಯಿ ಹೇಳಿ ಕಳಿಸಿದರೆಂದು ಬಾಲಕ ಹೇಳಿದ್ದಾನೆ. ನಂತರ ಧೈರ್ಯ ಮಾಡಿ ರೈಲು ಹತ್ತಿ ಗಡಿ ತಲುಪಿದ ಬಾಲಕ ಸದ್ಯ ಜನಸಾಮಾನ್ಯರಿಗೆ ಹೀರೋ ಆಗಿದ್ದಾನೆ.ರೈಲು ಪ್ರಯಾಣದ ಮೂಲಕ ಸ್ಲೋವಾಕಿಯಾದಲ್ಲಿರುವ ಸಂಬಂಧಿಕರನ್ನು ತಲುಪಿದ್ದಾನೆ. ಹುಡುಗ ತನ್ನ ನಗುವಿನೊಂದಿಗೆ ಗಡಿ ಕಾಯುವ ಗಾರ್ಡ್ ಗಳ ಹೃದಯವನ್ನು ಗೆದ್ದಿದ್ದಾನೆ. “ಬಾಲಕನ ನಗು, ನಿರ್ಭಯತೆ ಮತ್ತು ಸಮರ್ಪಣೆ ಎಲ್ಲವೂ ನಿಜವಾದ ನಾಯಕನ ಗುಣಗಳು” ಎಂದು ಉಕ್ರೇನಿಯನ್ ಗೃಹ ಸಚಿವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಗಡಿ ಕಾವಲುಗಾರರು ಬಾಲಕನ ಬಳಿ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಬ್ರಾಟಿಸಾಲ್ವಾದಿಂದ ಬಂದ ಸಂಬಂಧಿಕರಿಗೆ ಬಾಲಕನನ್ನ ಹಸ್ತಾಂತರಿಸಿದ್ದಾರೆ.ಈ ವಿಚಾರ ತಿಳಿದ ಬಾಲಕನ ತಾಯಿ ಸ್ಲೋವಾಕ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಹುಡುಗನ ಪೋಷಕರು ಉಕ್ರೇನ್‌ನಲ್ಲಿಯೇ ಇದ್ದರೂ ಹೊರ ಬಾರದ ಪರಿಸ್ಥಿತಿ, ಉಕ್ರೇನ್ ರಷ್ಯಾ ಯುದ್ದದ ಸಂದರ್ಭದಲ್ಲಿ ತಮ್ಮ ಪ್ರಾಣ ಉಳಿಯುತ್ತದೋ ಇಲ್ಲವೋ ಗೊತ್ತಿಲ್ಲ ಆದರೇ ತಮ್ಮ ಕನಸಿನ ವಾರಸುದಾರನಾದರೂ ಸುರಕ್ಷಿತವಾಗಿರುತ್ತಾನೆ ಎಂದು ಭಾವಿಸಿದ ಅವರು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾರೆ.