ಮುಂದಗೋಡ

ಹೊಲದಲ್ಲಿ ನೇಗಿಲು ಹೊಡೆಯುವಾಗ ಗಾಯಗೊಂಡ ನಾಗರಹಾವು ರಕ್ಷಣೆ: ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡುಗಡೆ

ಹೊಲದಲ್ಲಿ ನೇಗಿಲು ಹೊಡೆಯುವಾಗ ಗಾಯಗೊಂಡ ನಾಗರಹಾವು ರಕ್ಷಣೆ: ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡುಗಡೆ

  ಮುಂಡಗೋಡ : ತಾಲೂಕಿನ ಮೂಡಸಾಲಿ ಗ್ರಾಮದ ಕೃಷಿ ಭೂಮಿಯಲ್ಲಿ ನೇಗಿಲು ಹೊಡೆಯುವ ವೇಳೆ ನಾಗರಹಾವು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಘಟನೆ ಸ್ಥಳಕ್ಕೆ ತಕ್ಷಣವೇ ಸ್ಥಳೀಯ ಗಸ್ತು ವನಪಾಲಕ್ ಮುತ್ತುರಾಜ ಹಳ್ಳಿ ಧಾವಿಸಿ, ಗಾಯಗೊಂಡ ನಾಗರಹಾವನ್ನು ಸುರಕ್ಷಿತವಾಗಿ ಕೈಸೇರಿಸಿಕೊಂಡು, ಮುಂಡಗೋಡ ಪಶುವೈದ್ಯ ಆಸ್ಪತ್ರೆಯ ಕಡೆಗೆ ಕೊಂಡೊಯ್ದರು. ಪಶುವೈದ್ಯರಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದ್ದು, ನಾಗರಹಾವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪೂರ್ಣಗೊಂಡ ನಂತರ ನಾಗರಹಾವನ್ನು ಮರಳಿ ಅರಣ್ಯ ವ್ಯಾಪ್ತಿಗೆ ಸುರಕ್ಷಿತವಾಗಿ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಸಮಾಜ ಸೇವಕರಾದ ರಾಜು ಗುಬ್ಬಕ್ಕನವರ, ಸಂತೋಷ ಸಣ್ಣಮನಿ, ಗಸ್ತು ವನಪಾಲಕರಾದ ಸಾಗರ ಕೊಣ್ಣೂರು, ಹಾಗು ಆಸ್ಪತ್ರೆ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡು ಅಮೂಲ್ಯ ಸಹಕಾರ ನೀಡಿದರು. 


ಸುದ್ದಿ ಓದಿ