ಅಧ್ಯಕ್ಷರಾಗಿ ಚೌಗುಲೆ ಉಪಾಧ್ಯಕ್ಷರಾಗಿ ಕಾಟಕರ ಆಯ್ಕೆ
ಶಿರಗುಪ್ಪಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ
ಕಾಗವಾಡ 09: ತಾಲೂಕಿನ ಶಿರಗುಪ್ಪಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸುರೇಶ ಬಂಡಾ ಚೌಗುಲೆ ಮತ್ತು ಉಪಾಧ್ಯಕ್ಷರಾಗಿ ಶುಭಂ ರಾಜೇಂದ್ರ ಕಾಟಕರ ಅವಿರೋಧ ಆಯ್ಕೆಯಾಗಿದ್ದಾರೆ.
ಶುಕ್ರವಾದ ದಿ. 08 ರಂದು ಸಹಕಾರಿಯ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದು, ಚುನವಣೆಯಲ್ಲಿ ಎರಡೂ ಸ್ಥಾನಕ್ಕೆ ಕೇವಲ ಒಬ್ಬೊಬ್ಬರೇ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಅವರ ಆಯ್ಕೆ ಅವಿರೋಧವಾಗಿ ಆಗಿದೆ ಎಂದು ಸಹಕಾರಿಯ ರಿಟರ್ನಿಂಗ್ ಅಧಿಕಾರಿ ಹಾಗೂ ಚಿಕ್ಕೋಡಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ಗುರುಪ್ರಸಾದ ಕುಲಕರ್ಣಿ ಘೋಷಿಸಿದರು.
ಈ ವೇಳೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ನೂತನ ಅಧ್ಯಕ್ಷ-ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಸಹಕಾರಿಯ ಮತ್ತು ರೈತ ಸದಸ್ಯರ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಮುಖಂಡರಾದ ಅಪ್ಪಾಸಾಬ ಕುರುಂದವಾಡೆ, ಭೀಮು ಬೋಲೆ, ರಾಜೇಂದ್ರ ಚೌಗುಲೆ, ಮಹಾವೀರ ಕಾತ್ರಾಳೆ, ರಾಜೇಂದ್ರ ಅಕಿವಾಟೆ, ಸಹಕಾರಿಯ ಸದಸ್ಯರಾದ ಅಭಯಕುಮಾರ ಅಕಿವಾಟೆ, ರುದ್ರಗೌಡಾ ಪಾಟೀಲ, ಕಿರಣ ಬೋಲೆ, ಶಿವಾನಂದ ಪಾಟೀಲ, ಅಫ್ರೋಜ್ ಕನವಾಡೆ, ಜ್ಯೋತಿ ಪೋದಾಲೆ, ಸಂಜೀವಿನಿ ಕಾಗವಾಡೆ, ಮುಕಾರಿ ವಡ್ಡರ, ಅಪ್ಪಾಸಾಬ ಕೋಳಿ, ಶೋಭಾ ಶಿರಗುಪ್ಪೆ, ವಿಜಯ ಅಕಿವಾಟೆ, ಬ್ಯಾಂಕ್ ನೀರೀಕ್ಷಕ ಎಸ್.ಎಸ್. ಬುರುಡ, ಮುಖ್ಯ ಕಾರ್ಯನಿರ್ವಾಹಾಕ ಅಧಿಕಾರಿ ಶ್ರೇಣಿಕ ಮಾಂಗೂರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 