'ಮಹಾ ಬಿಕ್ಕಟ್ಟಿ'ನತ್ತ ಚೀನಾ... ಆತಂಕದಲ್ಲಿ ಜಾಗತಿಕ ಬ್ಯಾಂಕಿಂಗ್, ರಿಯಾಲ್ಟಿ ವಲಯ...!
ಬೀಜಿಂಗ್, ಡಿ 10: ಕಮ್ಯುನಿಸ್ಟ್ ದೇಶ ಚೀನಾ ಮಹಾ ಬಿಕ್ಕಟ್ಟಿನ ಅಂಚಿನಲ್ಲಿ ನಿಂತಿದೆ. ಒಂದೆಡೆ ಕೊರೊನಾ ಸವಾಲುಗಳು, ಮತ್ತೊಂದೆಡೆ ಕಾರ್ಪೊರೇಟ್ ವಲಯದ ಮೇಲೆ ವ್ಯತಿರಿಕ್ತ ಪರಿಣಾಂ ಬೀರುತ್ತಿರುವ ಅಧ್ಯಕ್ಷ ಜಿಂಗ್ ಪಿನ್ ಅವರ ನಿರ್ಧಾರಗಳು , ಇನ್ನೊಂದೆಡೆ ರಿಯಾಲ್ಟಿ ವಲಯದಲ್ಲಿ ದೊಡ್ಡ ಬಿಕ್ಕಟ್ಟಿನಿಂದಾಗಿ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಚೀನಾ ಕುಸಿತ ದತ್ತ ಸಾಗುತ್ತಿದೆ. ಚೀನಾದ ರಿಯಾಲ್ಟಿ ದೈತ್ಯ ಎವರ್‌ಗ್ರಾಂಡೆ (ಎವರ್‌ಗ್ರಾಂಡೆ) ನಿಗದಿಪಡಿಸಿದ ಸಾಲ ಪಾವತಿಯ ಗಡುವು ಮುಗಿದಿದ್ದು, ಬಹುತೇಕ ಡೀಫಾಲ್ಟರ್ ಸ್ಥಿತಿ ತಲುಪಿದೆ ಎಂದು ಭಾವಿಸಲಾಗಿದೆ.
ಎವರ್‌ಗ್ರಾಂಡ್ ವಿಶ್ವದ ಅತ್ಯಂತ ಹೆಸರುವಾಸಿ ನಿರ್ಮಾಣ ಸಂಸ್ಥೆ ಆದರೆ ನಿಗಧಿತ ಸಮಯದಲ್ಲಿ ಬಡ್ಡಿ ಮರುಪಾವತಿಸಲು ವಿಫಲವಾಗಿದೆ. ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ಸುಮಾರು 300 ಶತಕೋಟಿ ಡಾಲರ್ ಸಾಲ ಹೊಂದಿರುವ ಎವರ್‌ಗ್ರಾಂಡ್ ಗಡುವಿನೊಳಗೆ ಬಡ್ಡಿ ಮರುಪಾವತಿಸವಲ್ಲಿ ವಿಫಲಗೊಂಡಿದೆ, ಆಸ್ತಿಗಳನ್ನು ಮಾರಾಟ ಮಾಡಿದರೂ (ಕೆಲವು ಒಪ್ಪಂದಗಳನ್ನು ತಲುಪಲು ಸಾಧ್ಯವಾಗದಿದ್ದರೂ) ಸಮಯಕ್ಕೆ ಪಾವತಿಸಲು ಸಾಧ್ಯವಾಗಿಲ್ಲ. ಚೀನಾದ ರಿಯಾಲ್ಟಿ ಹಾಗೂ ಬ್ಯಾಂಕಿಂಗ್ ವಲಯ ಕುಸಿತದ ಭೀತಿಯಿಂದ ಕಂಪಿಸುತ್ತಿದೆ.
ಫಿಚ್ ಘೋಷಣೆ...
ಸೋಮವಾರದವರೆಗೆ (ಡಿಸೆಂಬರ್ 6, 2021) ಸುಮಾರು 1.2 ಶತಕೋಟಿ ಡಾಲರ್ ಸಾಲ ಎವರ್‌ಗ್ರಾಂಡ್ ನೀಡಬೇಕಿದೆ. ಆದರೆ, ಬುಧವಾರದೊಳಗೆ ಯಾವುದೇ ಪಾವತಿಗಳಿಲ್ಲದೆ .. ಕಂಪನಿಯು ಬಹುತೇಕ ಡೀಫಾಲ್ಟ್ ಸ್ಥಿತಿಗೆ ತಲುಪಿದೆ ಎಂದು ಘೋಷಿಸುವ ಸಾಧ್ಯತೆಗಳು ಹೆಚ್ಚಿವೆ. ವಿಶ್ವದ ಅತಿದೊಡ್ಡ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಫಿಚ್ ಎವರ್‌ಗ್ರಾಂಡ್ ಅನ್ನು ಡಿಫಾಲ್ಟ್ ಎಂದು ಘೋಷಿಸಿರುವುದು ವಿಶೇಷ
ರಿಯಾಲ್ಟಿ ರಂಗದ ಬಗ್ಗೆ ಚೀನಾ ಸರ್ಕಾರ ಅನುಸರಿಸುತ್ತಿರುವ ಕಠಿಣ ನಿಲುವು ಎವರ್‌ಗ್ರಾಂಡ್ ಪತನಕ್ಕೆ ಕಾರಣವೆಂದು ಕಂಡುಬರುತ್ತಿದೆ. ಸರ್ಕಾರ ತಂದಿರುವ ಹೊಸ ನಿಯಮಗಳಿಂದ ತಪ್ಪಿಸಿಕೊಳ್ಳಲು ಡಿಸ್ಕೌಂಟ್ ಘೋಷಿಸಿ.. ಎವರ್ ಗ್ರಾಂಡ್ ಸಂಕಷ್ಟಕ್ಕೆ ಸಿಲುಕಿದೆ. ಒಂದೊಮ್ಮೆ ಚೀನಾದಲ್ಲಿ ಬೃಹತ್ ಕಾರ್ಪೊರೇಟ್ ವಲಯ ಕುಸಿತವಾದರೆ, ಜಾಗತಿ ಕ ಮಾರುಕಟ್ಟೆಯೂ ಅಲುಗಾಡುವುದು ನಿಶ್ಚಿತ
ಎವರ್‌ಗ್ರಾಂಡ್ .. ಚೀನಾದಲ್ಲಿ 1996ರಲ್ಲಿ ಆರ್ಭಟದಿಂದ ಸಾಗುತ್ತಿದ್ದ ನಗರೀಕರಣದ ಸಮಯದಲ್ಲಿ ಶೆನ್‌ಜೆನ್ ಕೇಂದ್ರವಾಗಿ ರಿಯಲ್ ಎಸ್ಟೇಟ್ ಗುಂಪು ಸ್ಥಾಪನೆಗೊಂಡಿತ್ತು . ಇದು 2009 ರಲ್ಲಿ 722 ಮಿಲಿಯನ್ ಡಾಲರ್ ಐಪಿಓ ನೊಂದಿಗೆ ಹಾಂಗ್ ಕಾಂಗ್ ಷೇರು ವಿನಿಮಯ ಕೇಂದ್ರದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. = ತದನಂತರ ಚೀನಾದಲ್ಲಿ 9 ಶತಕೋಟಿಯೊಂದಿಗೆ ಅತಿದೊಡ್ಡ ಖಾಸಗಿ ಆಸ್ತಿ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿತು. ಆ ಮೂಲಕ ಸಂಸ್ಥಾಪಕ ಕ್ಸು ಜಿಯಾನ್ (ಹುಯಿ ಕಾ ಯಾನ್) ಕುಬೇರನನ್ನಾಗಿ ಪರಿವರ್ತಿಸಿತು. 2010 ರಲ್ಲಿ ಗುವಾಂಗ್‌ಝೌ ಫುಟ್‌ಬಾಲ್ ತಂಡದ ಸ್ವಾಧೀನ, ಪ್ರವಾಸೋದ್ಯಮ, ಮನರಂಜನಾ ವ್ಯವಹಾರದೊಂದಿಗೆ ಸುದ್ದಿಗೆ ಬಂದಿತ್ತು. ನೀರಿನ ಬಾಟಲ್ ತಯಾರಿಕೆ, ಇ ವಿ ತಯಾರಿಕೆಯಲ್ಲಿ ಹೂಡಿಕೆ ಮಾಡಿದೆ.