ಚೀನಾ ಆಕ್ಷೇಪ .. ಭಾರತದ ತಿರಸ್ಕಾರ
ನವದೆಹಲಿ, ಅ 14: -ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರ ಅರುಣಾಚಲ ಪ್ರದೇಶ ಭೇಟಿಗೆ ಆಕ್ಷೇಪಿಸಿರುವ ಚೀನಾ ಕ್ರಮವನ್ನು ಭಾರತ ಬಲವಾಗಿ ತಿರಸ್ಕರಿಸಿದ್ದು, ಅರುಣಾಚಲ ಪ್ರದೇಶ ಭಾರತದಿಂದ ಬೇರ್ಪಡಿಸಲಾಗದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅರುಣಾಚಲ ಪ್ರದೇಶದ ಇತ್ತೀಚಿನ ಭೇಟಿ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆ ಕುರಿತ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ.. ಅರುಣಾಚಲ ಪ್ರದೇಶ ಭಾರತದ ರಾಜ್ಯವಾಗಿದ್ದು, ಭಾರತೀಯ ನಾಯಕರು ಆ ರಾಜ್ಯಕ್ಕೆ ನಿಯಮಿತವಾಗಿ ಪ್ರವಾಸ ಕೈಗೊಳ್ಳುತ್ತಾರೆ. ಭಾರತದ ರಾಜ್ಯವೊಂದಕ್ಕೆ ಭಾರತೀಯ ನಾಯಕರ ಭೇಟಿಗೆ ಆಕ್ಷೇಪ ವ್ಯಕ್ತಪಡಿಸುವುದರಲ್ಲಿ ಯಾವುದೇ ತರ್ಕವಿಲ್ಲ ಭಾರತೀಯ ಜನರನ್ನು ಅರ್ಥಮಾಡಿಕೊಳ್ಳಬೇಕು ಎಂದು ಉತ್ತರಿಸಿದ್ದಾರೆ.
ಭಾರತ- ಚೀನಾ ಪಶ್ಚಿಮ ಗಡಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಪ್ರಸಕ್ತ ಸ್ಥಿತಿಗೆ ಚೀನಾ ನಡೆಯುತ್ತಿರುವ ಏಕ ಪಕ್ಷೀಯವಾಗಿ, ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಿ ಯಥಾಸ್ಥಿತಿ ಬಲಿಸುತ್ತಿರುವುದೇ ಕಾರಣ ಎಂದು ವಕ್ತಾರರು ಹೇಳಿದ್ದಾರೆ.