ಅಂತರರಾಷ್ಟ್ರೀಯ

ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ವಿಧಿಸಿದ ಚೀನಾ

ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ವಿಧಿಸಿದ ಚೀನಾ

ಬೀಜಿಂಗ್ 04:‌ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾದ ಸರಕುಗಳ ಮೇಲೆ ಶೇ.10ರಷ್ಟು ಸುಂಕ ವಿಧಿಸಿದ್ದ ಬೆನ್ನಲ್ಲೇ ಚೀನಾ ಕೂಡ ಅಮೆರಿಕದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15ರಷ್ಟು ಸುಂಕ ವಿಧಿಸಿದೆ. ಜತೆಗೆ ಗೂಗಲ್‌ ವಿರುದ್ಧ ತನಿಖೆ ನಡೆಸುವುದಾಗಿ ಘೋಷಿಸಿದೆ. 

ಅಮೆರಿಕದ ಟೆಕ್‌ ದೈತ್ಯ ಸಂಸ್ಥೆಯಾದ ಗೂಗಲ್‌ ನ ನಂಬಿಕೆ ವಿರೋಧಿ ಉಲ್ಲಂಘನೆ ವಿರುದ್ಧ ಚೀನಾ ತನಿಖೆ ನಡೆಸಲಿದೆ ಎಂದು ಸ್ಟೇಟ್‌ ಅಡ್ಮಿನಿಸ್ಟ್ರೇಷನ್‌ ಫಾರ್‌ ಮಾರ್ಕೆಟ್‌ ರೆಗ್ಯುಲೇಷನ್‌ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕದ ಏಕಪಕ್ಷೀಯ ಸುಂಕ ಹೇರಿಕೆಯು ವಿಶ್ವ ವ್ಯಾಪಾರ ಸಂಘಟನೆಯ ನಿಯಮಗಳ  ಉಲ್ಲಂಘನೆಯಾಗಿದೆ ಎಂದು ಚೀನಾದ ಹಣಕಾಸು ಸಚಿವಾಲಯ ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ಆರೋಪಿಸಿದೆ.

ಅಮೆರಿಕದ ಸುಂಕ ನೀತಿಗೆ ಸಡ್ಡು ಹೊಡೆದಿರುವ ಚೀನಾ ಇದೀಗ ಅಮೆರಿಕದ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ಸಂಪತ್ತಿನ ಆಮದಿನ ಮೇಲೆ ಬರೋಬ್ಬರಿ ಶೇ.15ರಷ್ಟು ಸುಂಕ ವಿಧಿಸಿದೆ. ಅಲ್ಲದೇ ತೈಲ ಮತ್ತು ಕೃಷಿ ಉಪಕರಣಗಳ ಮೇಲೆ ಶೇ.10ರಷ್ಟು ಶುಲ್ಕ ವಿಧಿಸಿದೆ.


ಸುದ್ದಿ ಓದಿ