ಅಂತರರಾಷ್ಟ್ರೀಯ

ಚೀನಾ ವಿಮಾನ ಪತ್ತೆ: ಎರಡನೇ ಬ್ಲಾಕ್ ಬಾಕ್ಸ್ ಪತ್ತೆ

ಚೀನಾ ವಿಮಾನ ಪತ್ತೆ: ಎರಡನೇ ಬ್ಲಾಕ್ ಬಾಕ್ಸ್ ಪತ್ತೆ

ಬೀಜಿಂಗ್: ಮಾರ್ಚ್ 25: ವಿಮಾನದ ದತ್ತಾಂಶ ರೆಕಾರ್ಡರ್ ಎಂದು ನಂಬಲಾದ ಎರಡನೇ ಕಪ್ಪು ಪೆಟ್ಟಿಗೆಯನ್ನು ಶೋಧನಾ ತಂಡವು ಪತ್ತೆ ಮಾಡಿದೆ. ಈ ಮೂಲಕ ಚೀನಾದ ಪ್ರಯಾಣಿಕ ವಿಮಾನ ಪತನದ ಕಾರಣವನ್ನು ನಿರ್ಧರಿಸುವಲ್ಲಿ ಮಹತ್ವದ ಮುನ್ನಡೆ ಸಾಧಿಸಬಹುದು ಎಂದು ಚೀನಾ ಡೈಲಿ ವರದಿ ಮಾಡಿದೆ

ಮಾಧ್ಯಮ ವರದಿಯ ಪ್ರಕಾರ, ವಿಮಾನದ ಹಿಂಭಾಗದಲ್ಲಿದ್ದ ಎರಡನೇ ಕಪ್ಪು ಪೆಟ್ಟಿಗೆಯು ಫ್ಲೈಟ್ ಡೇಟಾ ರೆಕಾರ್ಡರ್ (ಎಫ್‌ಡಿಆರ್) ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಮೊದಲ ಬ್ಲಾಕ್ ಬಾಕ್ಸ್ ಪತ್ತೆಯಾಗಿತ್ತು.

ಫ್ಲೈಟ್ ಡೇಟಾ ರೆಕಾರ್ಡರ್ ವೇಗ, ಎತ್ತರ ಮತ್ತು ದಿಕ್ಕಿನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ, ಜೊತೆಗೆ ಪೈಲಟ್ ಕ್ರಮಗಳು ಮತ್ತು ಪ್ರಮುಖ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ವಿವರಿಸುತ್ತದೆ.

ಕಾಕ್ ಪಿಟ್ ಧ್ವನಿ ರೆಕಾರ್ಡರ್ (ಸಿವಿಆರ್) ಎಂದು ಹೇಳಲಾದ ಮೊದಲ ಕಪ್ಪು ಪೆಟ್ಟಿಗೆಯನ್ನು ಬೀಜಿಂಗ್‌ನಲ್ಲಿರುವ ಪ್ರಯೋಗಾಲಯದಲ್ಲಿ ಡಿಕೋಡ್ ಮಾಡಲಾಗುತ್ತಿದೆ ಮತ್ತು ಡೇಟಾ ಡೌನ್‌ಲೋಡ್ ಮತ್ತು ವಿಶ್ಲೇಷಣೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

132 ಜನರಿದ್ದ ಬೋಯಿಂಗ್ 737-800 ವಿಮಾನವು ವುಝೌ ನಗರದ ಟೆಂಗ್‌ಕ್ಸಿಯಾನ್ ಕೌಂಟಿಯ ಹಳ್ಳಿಯೊಂದರಲ್ಲಿ ಸೋಮವಾರ ಪತನಗೊಂಡಿದೆ. ಇದುವರೆಗೆ ಬದುಕುಳಿದವರು ಪತ್ತೆಯಾಗಿಲ್ಲ.

ಸುದ್ದಿ ಓದಿ