ಮಕ್ಕಳು ತಂದೆ ತಾಯಿಯ ಆಶಯಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು; ಮಂಜುನಾಥ ಮರಿತಮ್ಮನವರ
ಮಕ್ಕಳು ತಂದೆ ತಾಯಿಯ ಆಶಯಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು; ಮಂಜುನಾಥ ಮರಿತಮ್ಮನವರ
ಮುಂಡಗೋಡ : ಪಟ್ಟಣದ ಆದಿ ಜಾಂಬವ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಮೌಲ್ಯಯುತ ಶಿಕ್ಷಣದೊಂದಿಗೆ ಸಂಸ್ಕಾರದ ನಿಜಜೀವನದ ಬದುಕು ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ಕುಂದಗೋಳದ ಮುರಾರ್ಜಿ ದೇಸಾಯಿ ಪ್ರಾಂಶುಪಾಲರಾದ ಶ್ರೀ. ಮಂಜುನಾಥ. ಮರಿತಮ್ಮನವರ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿ ವಿದ್ಯಾರ್ಥಿಗಳ ಕುರಿತು ಮಾತನಾಡುತ್ತಾ ಎಲ್ಲ ಮಕ್ಕಳ ತಂದೆ ಮತ್ತು ತಾಯಿಯ ಆಶಯಕ್ಕೆ ದಕ್ಕೆ ಬರದಂತೆ ನಡೆದುಕೊಳ್ಳುವ ಕಾರ್ಯ ಮಕ್ಕಳಾಗಬೇಕು ಮತ್ತು ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಮನುಷ್ಯನ ಸಂಸ್ಕಾರದಿಂದ ಈ ಭೂಮಿಯ ಮೇಲೆ ಬಾಳಬೇಕು ಮಕ್ಕಳು ನಿಮ್ಮ ಜೀವನದ ಬಗ್ಗೆ ಯೋಚಿಸಿ ಉತ್ತಮ ವಿದ್ಯಾರ್ಥಿಗಳು ನಿವಾಗಬೇಕು ಮತ್ತು ಹಲವಾರು ಕಥೆಗಳ ಹೇಳುವ ಮೂಲಕ ಮಕ್ಕಳಿಗೆ ಸಮಾಜದಲ್ಲಿ ಬಾಳಬೇಕು ನಿಮ್ಮ ಪಾಲಕರ ಮನಸ್ಸಿನ ಆಶೆಯಂತೆ ಶಿಕ್ಷಣ ಪಡೆದು ಬೆರೆಯವರಿಗೆ ಆದರ್ಶವಾಗಿರಬೇಕು ಎಂದು ಹೇಳಿದರು. ಮುಖ್ಯ ಅಥಿತಿಗಳು ಹಾಗೂ ಪತ್ರಕರ್ತರು ಶ್ರೀ. ನಜಿರುದ್ದಿನ. ತಾಡಪತ್ರಿಯವರು ಮಾತನಾಡುತ್ತಾ ಆದಿ ಜಾಂಬವ ಪ್ರೌಢಶಾಲೆಯಲ್ಲಿರುವ ಮಕ್ಕಳು ನಿಜಕ್ಕೂ ಪುಣ್ಯವಂತರು ಏಕೆಂದರೆ ಇದರ ಅಧ್ಯಕ್ಷರಾದ ಶ್ರೀ. ಎಸ್. ಫಕ್ಕಿರ್ಪ ನವರು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಇಂತಹ ಆರ್ಥ ಪೂರ್ಣೇವಾದ ಕಾರ್ಯಕ್ರಮಗಳನ್ನು ಏರಿ್ಡಸಿರುವುದು ಬಹಳ ಶ್ಲಾಘನಿಯವಾಗಿದೆ. ವಿದ್ಯಾರ್ಥಿಗಳೆ ನೀವು ಶಿಕ್ಷಕರು ಹೇಳಿದ ಪಾಠಗಳನ್ನು ಮನನ ಮಾಡಿ ಪ್ರತಿ ದಿನ ಕನಿಷ್ಠ 2 ತಾಸು ಒಡಲೇಬೇಕು ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಬೇಕು ದಿನಕ್ಕೆ 8 ಘಂಟೆ ನಿದ್ದೆ ಮಾಡಬೇಕು. ಪರೀಕ್ಷೆ ಸಮಯದಲ್ಲಿ 4-ರಿಂದ 5 ಘಂಟೆ ಅಭ್ಯಾಸ ಮಾಡಬೇಕು ಪ್ರತಿಯೊಬ್ಬರು ಶಿಕ್ಷಣದ ಮಹತ್ವ ತಿಳಿದುಕೊಳ್ಳಬೇಕು ಈ ವಿದ್ಯಾರ್ಥಿ ಸಮಯದಲ್ಲಿ ಓದುವುದು ನಿಮಗೆ ಪರಿಪಾಟವಾಗಬೇಕು ಅಲ್ಲದೆ ಓದು ನಿಮ್ಮ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ. ನಿಮ್ಮ ಯೋಚನೆ ಸಮ ಸಮಾಜದ ಕಡೆಗೆ ವಾಲಬೇಕು ಅಂದಾಗ ಮಾತ್ರ ನೀವು ಶಿಕ್ಷಣ ಪಡೆದಿದ್ದಕ್ಕೆ ಸಹಾಯವಗಬಾಲ್ಲದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ. ಎಸ್. ಫಕ್ಕಿರ್ಪನವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಮುಂಬರುವ ದಿನಗಳ ಜೇವನ ಉತ್ತಮವಾಗಿರಬೇಕು. ಅನ್ನುವ ಸಾಧುದ್ದೆಷದಿಂದ ನಮ್ಮ ಪ್ರೌಢಶಾಲೆಯಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದರ ಉಪಯೋಗ ಪಡೆದು ಸಮಾಜದಲ್ಲಿ ಸತ್ಯದ ದಾರಿಯಲ್ಲಿ ಒಳ್ಳೆಯ ಸಂಸ್ಕಾರ ಪಡೆದು ಜೀವನ ನಡೆಸಿದರೆ ನಾವು ಮಾಡುವ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗುತ್ತದೆ. ನೀವೆಲ್ಲರೂ ನಡತೆಯಿಂದ ಬಾಳುವಂತೆ ಗಟ್ಟಿಯಾಗಬೇಕು ಹಾಗಾಗಿ ಇದರ ಸದುಪಯೋಗ ಪಡೆಯಬೇಕು ಎಂದರು. ಈ ಕಾರ್ಯಕ್ರಮದಲ್ಲಿ ರೋಹಿಣಿ. ನಾಯಕ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಆದಿ ಜಾಂಬವ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ. ಎಸ್. ಡಿ. ಮುಡೆಣ್ಣವರ ಪ್ರಸ್ತಾವಿಕ ಮಾತನಾಡಿ ಸ್ವಾಗತ ಕೋರಿದರು. ಶ್ರೀ. ಆರ್. ಎಸ್. ಅಕ್ಕಿವಳ್ಳಿ ನಿರೋಪಿಸಿದರು. ಕೊನೆಯಲ್ಲಿ ಪತ್ರಕರ್ತರಾದ ಶ್ರೀ. ನಜಿರುದ್ದಿನ. ತಾಡಪತ್ರಿಯವರು ಎಲ್ಲರ ಅಪೇಕ್ಷೆ ಮೇರೆಗೆ ಹಾಡನ್ನು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಶಾಂತ, ಶ್ರೀ. ಎಸ್. ಸಿ. ಪಾಟೀಲ, ಆರ್. ಬಿ. ಚವ್ಹಾಣ, ಶ್ರೀಮತಿ.. ಪಿ. ಸಿ. ಐನಪುರ, ಎಂ. ಕೆ. ಕೊಂಡೋಜಿ ಮುಂತಾದವರು ಹಾಜರಿದ್ದರು.