ಕಂಡ ಕಂಡವರಲ್ಲಿ ಪ್ರಾಣ ಭಿಕ್ಷೆ ಬೇಡುತ್ತಿದೆ ಬಡಪಾಯಿ ಜೀವ : ಬಡತನದಿಂದ ಬೆಂದಿರುವ ವ್ಯಕ್ತಿಗೆ ಬೇಕಿದೆ ಲೀವರ ಕಸಿಗೆ ಆರ್ಥಿಕ ನೆರವು

ಕಂಡ ಕಂಡವರಲ್ಲಿ ಪ್ರಾಣ ಭಿಕ್ಷೆ ಬೇಡುತ್ತಿದೆ ಬಡಪಾಯಿ ಜೀವ : ಬಡತನದಿಂದ ಬೆಂದಿರುವ ವ್ಯಕ್ತಿಗೆ ಬೇಕಿದೆ ಲೀವರ ಕಸಿಗೆ ಆರ್ಥಿಕ ನೆರವು

ಪಾರೇಶ ಭೋಸಲೆ

ಬೆಳಗಾವಿ : ಹೆತ್ತ ತಾಯಿ ಹಾಗೂ ನಂಬಿ ಬಂದ ಮಡದಿ ಮತ್ತು ಶಿಕ್ಷಣಕ್ಕಾಗಿ ಹಪ ಹಪಿಸುತ್ತಿರುವ ಪುಟ್ಟ ಮಕ್ಕಳು ಇವೆಲ್ಲರನ್ನು ಸಾಕುವ ಹೊಣೆ ಹೊತ್ತು, ಹಲಾವರು ಆಸೆ ಕಂಡಿದ್ದ ವ್ಯಕ್ತಿ ಈಗ ತಲೆ ಮೇಲೆ ಕೈಹೊತ್ತು ಕಂಡವರ ಮುಂದೆ ಪ್ರಾಣ ಭಿಕ್ಷೆಗೆ ಕಂಡವರಲ್ಲಿ ಕೈಚಾಚುವ ಮೂಲಕ ಗೋಳೊ ಅಂತಾ ಕಣ್ಣಿರು ಹಾಕುತ್ತಿರುವದು ವಿಪರ್ಯಾಸ ಸಂಗತಿ ಒಂದು ವರದಿಯಾಗಿದೆ.


   ಆಸ್ಪತ್ರೆಗೆ ತೋರಿಸಲು ಹಣವಿಲ್ಲದೆ, ಬಡತನದಿಂದ ಬೆಂದಿರುವ ಬಡ ಕುಟುಂಬದ ಜೀವ‌ ಒಂದು ತನ್ನ ಪ್ರಾಣಭಿಕ್ಷೆಗಾಗಿ ಕಂಡವರ ಕಡೆ ಕೈ ಚಾಚುತ್ತಿರುವದು ದುರ್ಧೈವದ ಸಂಗತಿಯಾಗಿದ್ದು, ಉಳ್ಳವರು ಯಾರಾದರು ಪ್ರಾಣ ಭೀಕ್ಷೆಗಾಗಿ ನೆರವು ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದೆ.

    ಹೌದು ಓದುಗರೇ ಇಂತಹದೊಂದು ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ವರದಿಯಾಗಿದೆ.‌ ಕರೋಶಿ ಗ್ರಾಮದಲ್ಲಿ ಕಳೆದ‌ ಕೆಲವು ವರ್ಷಗಳಿಂದ ಪಾನ್ ಅಂಗಡಿಯೊಂದನ್ನು ನಡೆಸುವ ಮೂಲಕ ತನ್ನ ಹೆತ್ತ ತಾಯಿ ಹಾಗೂ ನಂಬಿ ಬಂದ ಮಡದಿ ಮತ್ತು ಇಬ್ಬರು ಮಕ್ಕಳನ್ನು ಸಾಕಿ ಸಲುಹಬೇಕಿದ್ದ ಕರೋಶಿ ಗ್ರಾಮದ 32 ವರ್ಷದ ವ್ಯಕ್ತಿಯಾಗಿರುವ ಬಾಜಿರಾವ್ ಸೂಳಕುಡೆ ಅವರು ಲಿವರ್ ವೈಫಲ್ಯದಿಂದಾಗಿ ಬಳಲುತ್ತಿದ್ದಾರೆ. 

   ಬಾಜಿರಾವ್ ಈತ ಚಿಕ್ಕೋಡಿ ಪತ್ರಕರ್ತ ಕೆ.ಎಸ್ ಸುಳಕುಡೆ ಅವರ ಸಹೋದರನಾಗಿದ್ದು, ಸದ್ಯ ಇವರ ಮನೆಯಲ್ಲಿ ಬಡತನದ ಸಂಕಷ್ಟ ಎದುರಾಗಿದೆ. ಇವರ ಹೆಸರಿನಲ್ಲಿ ಯಾವುದೇ ಆಸ್ತಿ ಆಗಲಿ ಅಥವಾ ದುಡ್ಡು ಇರುವದಿಲ್ಲ. 

  ಬಾಜಿರಾವ್ ಸುಳಕುಡೆ ಈತನಿಗೆ ಲಿವರ ಸಿರೋಸೀಸನ ಕಾಯಿಲೆ ಆವರಿಸಿಕೊಂಡಿದ್ದು,  ಈಗ ಈತನ ಲೀವರ ಕಸಿ ಮಾಡುವ ಅವಶ್ಯಕತೆ ಇದೆ. ಇದಕ್ಕಾಗಿ 22 ಲಕ್ಷ ರೂಪಾಯಿಗಳ ಖರ್ಚು ಬರಲಿದೆ. ತನ್ನ ಕುಟುಂಬವನ್ನು ಸಾಕಲು ಆಗದ ಈ ವ್ಯಕ್ತಿಗೆ 22 ಲಕ್ಷ ಖರ್ಚು ಮಾಡಿ ಲೀವರ್ ಕಸಿ ಮಾಡಿಸಲು ಸಾದ್ಯ ಆಗುತಾ ಇಲ್ಲ.‌  

  ಈಗ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಬಾಜಿರಾವ್ ಸುಳಕುಡೆ ಇವರ ಅಣ್ಣನಾದ ಕೆ.ಎಸ್ ಸುಳಕುಡೆ ಅವರು ಪತ್ರಕರ್ತರಾಗಿ ಚಿಕ್ಕೋಡಿ ತಾಲೂಕಿನಲ್ಲಿ ಕಾರ್ಯ ಮಾಡುತ್ತಿದ್ದಾರೆ. ಕೃಷಿ ಭೂಮಿ ಇಲ್ಲ. ಚಿಕ್ಕ ಪಾನ್ ಶಾಪ್ ಮೇಲೆ ಕುಟುಂಬ ನಿರ್ವಹಣೆ ಮಾಡುವ

 ಬಾಜಿರಾವ್ ಸುಳಕುಡೆ ಅವರು  ಕಳೆದ 8 ವರ್ಷಗಳಿಂದ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. 

  ಅವರ ಸಹೋದರ ಪತ್ರಕರ್ತ ಕೆ ಎಸ್  ಸುಳಕೂಡೆ ಅವರು ಚಿಕ್ಕೋಡಿ, ನಿಪಾಣಿ ಮತ್ತು ಬೆಳಗಾವಿಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ತಾತ್ಕಾಲಿಕವಾಗಿ ಗುಣವಾಗುತ್ತದೆ ಹೊರತು ಮತ್ತೆ ಬಳಿಕ ಆರೋಗ್ಯ ಹದಗೆಡುತ್ತದೆ.

   ಬಾಜಿರಾವ ಸುಳಕುಡೆ ಇವರಿಗೆ ಚಿಕಿತ್ಸೆಗೆ ಇಲ್ಲಿಯವರೆಗೆ 8 ಲಕ್ಷದವರೆಗೆ ಖರ್ಚು ಮಾಡಲಾಗಿದೆ.

ಸದ್ಯ ಬೆಳಗಾವಿಯ ಖಾಸಗಿ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಜಿರಾವ್ ಸುಳಕುಡೆ ಅವರ ಲಿವರ್ ವಿಫಲವಾಗಿದ್ದು, ಲಿವರ್ ಕಸಿ ಮಾಡಬೇಕಾಗಿದೆ ಎಂದು ಅಲ್ಲಿನ ಹಿರಿಯ ವೈದ್ಯರು ಹೇಳಿದ್ದಾರೆ.

ಇದಕ್ಕೆ ಸುಮಾರು 22 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆದರೆ ಕುಟುಂಬದವರ ಕಡೆಗೆ ಇಷ್ಟೊಂದು ಹಣ ಇಲ್ಲದೆ ಅವರ ಇವರ ಕಡೆಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಬಾಜಿರಾವ್ ಬೇರೆ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತಮ್ಮ ಬಳಿ ಇದ್ದ ಹಣವೂ ಖರ್ಚಾಗಿದ್ದು, ಈಗ ಲಿವರ್ ಕಸಿ ಹಾಗೂ ಇತರೆ ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲದಂತಾಗಿದೆ ಪರದಾಡುವಂತಾಗಿದೆ.

   ಆದರೆ ಬಾಜಿರಾವ್ ಸೂಳಕೂಡೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಆದಷ್ಟು ಬೇಗ ಲಿವರ್ ಕಸಿ ಮಾಡಬೇಕಾಗಿದೆ ಪರಿಸ್ಥಿತಿ ಇದೆ. 

ಆದ್ದರಿಂದ ದಾನಿಗಳು ಹಾಗೂ ಸಂಘ ಸಂಸ್ಥೆಗಳು ಮತ್ತು ನಾಗರಿಕರಿಂದ ಆರ್ಥಿಕ ನೆರವು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಪ್ರಾಣ ಭಿಕ್ಷೆ ನೀಡಲು ಇಚ್ವಿಸುವವರು  ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ: 19390100033095

IFSC ಕೋಡ್: FDRL0001939 ಅಥವಾ 9632731806 ಗೆ ಕರೆ ಮಾಡಿ ಆರ್ಥಿಕ ಸಹಾಯ ಮಾಡುವಂತೆ ಕೋರಿದ್ದಾರೆ.

ಸುದ್ದಿ ಓದಿ