ಮಹಲಿಂಗಪುರ

ಹಿಂದೂಗಳ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ : ವಿದ್ಯಾಧರ ಸವದಿ

ಹಿಂದೂಗಳ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ : ವಿದ್ಯಾಧರ ಸವದಿ

ಮಹಾಲಿಂಗಪುರ 19 : ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ತಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೊಟೇಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮ ಭಾರತವನ್ನು ತಮ್ಮ ಆಳ್ವಿಕೆಗೆ ತಂದರು ಶಿವಾಜಿಯ ಶೌರ್ಯ, ಸಾಹಸ,ರಾಷ್ಟ್ರಭಕ್ತಿ ಎಂದೆಂದಿಗೂ ಪ್ರೇರಣಾದಾಯಿ. ಭಾರತದ ಚರಿತ್ರೆಯಲ್ಲಿ ಶಿವಾಜಿ ಹೆಸರು ಅಗ್ರಪಂಕ್ತಿಯಲ್ಲಿ ನಿಲ್ಲುವಂತದು ಆದ್ದರಿಂದ ಹಿಂದೂಗಳ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಎಂದು ಬಾಗಲಕೋಟ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ವಿದ್ಯಾಧರ ಸವದಿ ಹೇಳಿದರು. 

ಅವರು ನಗರದ ಛತ್ರಪತಿ ಶಿವಾಜಿ ಸಮುದಾಯ ಭವನದಲ್ಲಿ ನಡೆದ ಶಿವಾಜಿ ಮಹಾರಾಜರ 396 ನೇ ಜಯಂತಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿ ಮಾತನಾಡಿ 19 ಪೇಬ್ರುವರಿ 1630 ರಲ್ಲಿ ಮಹಾರಾಷ್ಟ್ರದ ಶಿವನೇರಿ ಎಂಬಲ್ಲಿ ರಾಜಮಾತೆ ಜೀಜಾಭಾಯಿ ಮತ್ತು ಶಹಾಜಿ ಉದರದಲ್ಲಿ ಜನಿಸಿದರು. 17 ನೇ ಶತಮಾನದಲ್ಲಿ ಮೊಘಲರು ಮತ್ತು ಆದಿಲ್ ಶಾಹಿಯಂತಹ ಪ್ರಬಲ ಶಕ್ತಿಗಳನ್ನು ಎದುರಿಸಿ ಸ್ವತಂತ್ರ " ಹಿಂದವಿ ಸ್ವರಾಜ್ಯ " ಸ್ಥಾಪಿಸಿದ ಶೂರ್ ಧೀಮಂತ ಆಡಳಿತಗಾರ ಎಂದರು 

ನಂತರ ಮಾತನಾಡಿದ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮಹಾಂತೇಶ್ ಹಿಟ್ಟಿನಮಠ ವಾಣಿಜ್ಯ, ಮತ್ತು ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರಗತಿಪರ ನೀತಿಗಳನ್ನು ಅವರು ಜಾರಿಗೆ ತಂದರು,ಸಮೃದ್ಧಿ ಮತ್ತು ಬೆಳವಣಿಗೆಯ ವಾತಾವರಣವನ್ನು ಬೆಳೆಸಿದವರು ಶಿವಾಜಿ ಮಹಾರಾಜರು ಎಂದರು.  

ಮೆರವಣಿಗೆ : ಬುದ್ನಿ ಪಿ ಡಿ ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಕಲ ಮಂಗಲವಾದ್ಯಗಳೊಂದಿಗೆ ಪ್ರಾರಂಭಗೊಂಡು, ಕಾಳಿಕಾ ಮಂದಿರ್, ಬನಶಂಕರಿ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಡುಚೌಕಿ, ಜೋಡು ರಸ್ತೆ,, ಬಸವೇಶ್ವರ ವೃತ್ತ, ಮಾರ್ಗವಾಗಿ ವಡಗೇರಿ ಬಡಾವಣೆಯಲ್ಲಿರುವ ಮಾರಾಠಾ ಸಮುದಾಯ ಭವನ ತಲುಪಿತು. 

ಗಣ್ಯರಾದ ಯಲ್ಲಣ್ಣಗೌಡ ಪಾಟೀಲ, ಡಿ ವಾಯ ಎಸ್ ಪಿ ಎನ್ ಎಸ್ ಪಾಟೀಲ, ಪಿ ಎಸ್ ಅಯ್ ಕಿರಣ ಸತ್ತಿಗೇರಿ ಮುಖಂಡರಾದ ಶ್ರೀಮತಿ ಸವಿತಾ ಕೊಣ್ಣೂರ, ರವಿ ಜವಳಗಿ, ಮಲ್ಲಪ್ಪ ದಲಾಲ,ಅಧ್ಯಕ್ಷ ಮಹೇಶ ಜಾಧವ ಸೇರಿ ಮರಾಠ ಸಮಾಜದ ಎಲ್ಲ ಗುರುಹಿರಿಯರು ಸೇರಿ ಹಲವರು ಇದ್ದರು.  


ಸುದ್ದಿ ಓದಿ