ಅಂತರರಾಷ್ಟ್ರೀಯ

ಛೀ...ಛೀ.. ಪಾಂಡಾ ಅಮೇಧ್ಯದಿಂದ ಚಹಾ ತಯಾರಿಸಿ ಕುಡಿಯುತ್ತಾರಂತೆ....!

ಛೀ...ಛೀ..  ಪಾಂಡಾ  ಅಮೇಧ್ಯದಿಂದ   ಚಹಾ ತಯಾರಿಸಿ ಕುಡಿಯುತ್ತಾರಂತೆ....!

ಬೀಜಿಂಗ್‌,  ಅ   31: ಬ್ಲ್ಯಾಕ್ ಟೀ,   ಗ್ರೀನ್ ಟೀ,   ಲೆಮನ್  ಟೀ  ಇತ್ಯಾದಿ   ಹಲವು      ರೀತಿಯ   ಚಹಾ  ಹೆಸರು  ಕೇಳಿದ್ದೇವೆ..  ಕುಡಿಯುತ್ತಿರುತ್ತೇವೆ .   ಆದರೆ,  ಚೀನಾದಲ್ಲಿ  ಪಾಂಡಾ   ವಿಸರ್ಜಿಸುವ   ಮಲದಿಂದಲೂ   ಚಹಾ   ತಯಾರಿಸುತ್ತಾರಂತೆ ?.    ಅದರಲ್ಲೂ    ಇದು  ಜಗತ್ತಿನ  ಅತ್ಯಂತ ದುಬಾರಿ  ಹಾಗೂ  ಅಪರೂಪದ ಚಹಾವಾಗಿದೆಯಂತೆ..  ಸಾಮಾನ್ಯವಾಗಿ ಪಾಂಡಾಗಳು ಬಿದಿರು ಮೆಳೆಯ   ಸೊಪ್ಪು  ತಿನ್ನುತ್ತವೆ.

ಪಾಂಡಾಗಳು   ಹೊರಹಾಕುವ     ಸಗಣಿಯಲ್ಲಿ   ಅತ್ಯಧಿಕ ಪ್ರಮಾಣದ ಪೋಷಕಾಂಶಗಳು, ವಿಟಮಿನ್‌ ಗಳು,    ಕ್ಯಾನ್ಸರ್   ನಿರೋಧಕ   ಅಂಶಗಳು ಇವೆಯಂತೆ, ಹಾಗಾಗಿ   ಪಾಂಡಾ   ಚಹಾದ    ಒಂದು  ಪ್ಯಾಕೆಟ್ 2.4 ಲಕ್ಷ ರೂಪಾಯಿಗಳಂತೆ.   ಕೇವಲ ಪಾಂಡಾಗಳು ಮಾತ್ರವಲ್ಲ  ಸಾವಯವ  ಪದಾರ್ಥಗಳನ್ನು ಸೇವಿಸುವ   ಕೀಟಗಳ ವಿಸರ್ಜನೆಗಳಿಂದಲೂ   ಚೀನಿಯರು   ಚಹಾ  ತಯಾರಿಸುತ್ತಾರೆ. 

ಇದರ  ಒಂದು ಕಪ್  ಚಹಾ   ಬೇಕಿದ್ದರೆ  ರೂ.200ಕ್ಕೂ ಹೆಚ್ಚು ಹಣ ನೀಡಬೇಕು.  ಅಧಿಕ ರಕ್ತದೊತ್ತಡ,  ಜೀರ್ಣ ಕ್ರಿಯೆ  ಸಮಸ್ಯೆಗಳಿಂದ  ಬಳಲುತ್ತಿರುವರು  ಈ ಚಹಾವನ್ನು ಸೇವಿಸದರೆ    ಸಮಸ್ಯೆ  ನಿವಾರಣೆಯಾಗಲಿದೆಯಂತೆ,   ಈಗಾಗಿ  ಅಲ್ಲಿರುವ  ಅನೇಕರು ಇವುಗಳನ್ನು ಉಡುಗೊರೆಯಾಗಿ ವಿನಿಮಯ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿಯೂ ವಿವಿಧ  ಫ್ಲೇವರ್ಸ್‌ ಗಳಿವೆಯಂತೆ.

ಸುದ್ದಿ ಓದಿ