ಚಾರ್ ಧಾಮ್ ಯಾತ್ರೆ ಇಂದಿನಿಂದ ಪುನರಾಂಭ
ಡೆಹ್ರಾಡೂನ್, ಅ 20: ಉತ್ತರಾ ಖಂಡದಲ್ಲಿ ನಿರಂತರ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ, ಬುಧವಾರದಿಂದ ಪುನರಾರಂಭಗೊಳ್ಳಲಿದೆ. ಭಾರಿಯಿಂದ ಭಾರಿ ಮಳೆ ಸುರಿಯಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನಲೆಯಲ್ಲಿ ಅಕ್ಟೋಬರ್ 17 ರಿಂದ 18 ರವರೆಗೆ ಮೂರು ದಿನಗಳ ಕಾಲ ಯಾತ್ರೆಯನ್ನು ರದ್ದುಗೊಳಿಸಲಾಗಿತ್ತು.
ಗರ್ವಾಲ್ ನಲ್ಲಿ ಪರಿಸ್ಥಿತಿ ಬಹುತೇಕ ಸುಧಾರಿಸಿದ್ದು, ಅಲ್ಲಿ ಯಾತ್ರೆ ಪುನರಾರಂಭಗೊಂಡಿದೆ. ಬದರಿನಾಥವನ್ನು ಯಾತ್ರಾರ್ಥಿಗಳಿಗೆ ತೆರೆಯಲಾಗಿದೆ, ಇಂದು ಚಾರ್ ಧಾಮ್ ಯಾತ್ರೆ ಸಂಪೂರ್ಣವಾಗಿ ಪುನರಾಂಭಗೊಳ್ಳಲಿದೆ ”ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಶೋಕ್ ಕುಮಾರ್ ಹೇಳಿದ್ದಾರೆ.
"ನೈನಿತಾಲ್, ಹಲ್ದ್ವಾನಿ, ಉಧಮ್ ಸಿಂಗ್ ನಗರ, ಚಂಪಾವತ್ ಸೇರಿದಂತೆ ಉತ್ತರಾಖಂಡ್ ಕುಮಾನ್ ಪ್ರದೇಶಗಳು ಮಳೆಯಿಂದ ಹೆಚ್ಚು ತೊಂದರೆಗೊಳಗಾಗಿರುವ ಪ್ರದೇಶಗಳಾಗಿದ್ದು, ನೀರಿನ ಮಟ್ಟ ಕಡಿಮೆಯಾಗಿದ್ದರೂ, ಮಾರ್ಗಗಳನ್ನು ತೆರೆಯಲಾಗಿಲ್ಲ . ಇನ್ನೂ, ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.