ವೆಂಕಟಾಪುರ ಗ್ರಾಮದಲ್ಲಿ ವೃದ್ಧಾಶ್ರಮ ಅನಾಥಾಶ್ರಮದ ಅಡಿಗಲ್ಲು ಸಮಾರಂಭ
ವೆಂಕಟಾಪೂರ 26; ಇಂದು ಮುಂಡರಗಿ ತಾಲೂಕು ವೆಂಕಟಾಪುರ ಗ್ರಾಮದಲ್ಲಿ ಕಾಶಿ ರಾಮೇಶ್ವರ ಹರಿದ್ವಾರ ಬದರಿನಾಥ ವೈಷ್ಣೋದೇವಿ ಜಮ್ಮು ಕಾಶ್ಮೀರ ಹೀಗೆ ಹತ್ತು ಹಲವಾರು ಪುಣ್ಯಕ್ಷೇತ್ರಗಳನ್ನು ಅತಿ ಕಡಿಮೆ ದರದಲ್ಲಿ ವಯಸ್ಸಾದ ವೃದ್ಧರಿಗೆ ಹಾಗೂ ವೃದ್ಧ ದಂಪತಿಗಳಿಗೆ ದರ್ಶನ ಮಾಡಿಸಿದಂತ ಪುಣ್ಯಾತ್ಮ ಹಾಲಪ್ಪ ಎಲ್ಲಪ್ಪ ಅರಹುಣಸಿ ಇವರ ಮಹಾದಾಸೆಯ ಮೇರೆಗೆ ಹಳ್ಳಿಗುಡಿ ರಸ್ತೆಯಲ್ಲಿರುವ ಶರಣಪ್ಪ ಭೀಮಪ್ಪ ಬಿಸನಹಳ್ಳಿ ಇವರ ಜಾಗದಲ್ಲಿ ವೃದ್ಧಾಶ್ರಮ ಹಾಗೂ ಅನಾಥಾಶ್ರಮದ ಅಡಿಗಲ್ಲು ಸಮಾರಂಭವನ್ನು ಏರ್ಪಡಿಸಲಾಗಿತ್ತು
ದಿವ್ಯ ಸನ್ನಿಧಾನವನ್ನು ರಾಷ್ಟ್ರೀಯ ವಿಭೂಷಣ ರಾಷ್ಟ್ರಪ್ರಶಸ್ತಿ ವಿಜೇತರಾದ ಷ. ಬ್ರ. ಫಕೀರೇಶ್ವರ ಪಟ್ಟಾಧ್ಯಕ್ಷರು ಓಂಕಾರೇಶ್ವರ ಹಿರೇಮಠ ಓಂಕಾರೇಶ್ವರ ನಗರ ಗದಗ ಕಳಸಾಪುರ ಸೊರಟೂರು ಇವರು ಹಾಗೂ ಭೂದಾನಿಗಳಾದ ಶರಣಪ್ಪ ಭೀಮಪ್ಪ ಬಿಸನಹಳ್ಳಿ ಇವರುಗಳು ಅಮೃತ ಹಸ್ತದಿಂದ ಅಡಿಗಲ್ಲು ಸಮಾರಂಭವನ್ನು ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಅನ್ನದಾನೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ಸಭೆಯ ಅಧ್ಯಕ್ಷತೆಯನ್ನು ಹನಮವ್ವ ಎ. ನಾಯಕರ ಗ್ರಾಮ ಪಂಚಾಯತಿ ಅಧ್ಯಕ್ಷರು ಹಳ್ಳಿಕೇರಿ ಇವರು ವಹಿಸಿದರೆ ಕಾರ್ಯಕ್ರಮದಲ್ಲಿ ಶಿವಲಿಂಗಯ್ಯ ಗುರುವಿನ, ಶ್ರೀದೇವಿ ಗಿರೀಶ್ ಪೂಜಾರ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಳ್ಳಿಕೇರಿ ಹಾಗೂ ಕಾರ್ಯಕ್ರಮವನ್ನು ಶ್ರೀನಿವಾಸ್ ಸ್ವಾಗತಿಸುವ ಮುಖಾಂತರ ಈ ಕಾರ್ಯಕ್ರಮವನ್ನು ಸುಂದರವಾಗಿ ಪ್ರಕಾಶ್ ಬ ಬರದೂರ್ ನಿರೂಪಿಸಿದರು ಹಾಗೂ ಈ ಕಾರ್ಯಕ್ರಮಕ್ಕೆ ಕೋಟುಮಚಗಿ ಅಡವಿ ಸೋಮಪುರ ಇನ್ನು ಅನೇಕ ಗ್ರಾಮಗಳಿಂದ ಜನರು ಆಗಮಿಸಿದ್ದರು ಕೊನೆಯದಾಗಿ ಈ ಕಾರ್ಯಕ್ರಮವನ್ನು ಹಾಲಪ್ಪ ಅರಹುಣಸಿ ಅವರು ವಂದಿಸುವ ಮುಖಾಂತರ ಕಾರ್ಯಕ್ರಮಕ್ಕೆ ಮುಕ್ತಾಯಗೊಳಿಸಿದರು.