ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ
ಉಗರಗೋಳ 16: ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದ ಯಲ್ಲಮ್ಮಾ ದೇವಸ್ಥಾನ ಪ್ರಾಂಗಣದಲ್ಲಿನ ಹನುಮಂತ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಹೂಲಿಯ ಹಿರೇಮಠದ ಪಂಡಿತ ಅಜ್ಜಯ್ಯ ಶಾಸ್ತ್ರಿಗಳು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಾಯ್ ವಾಯ್ ಕಾಳಪ್ಪನವರ, ದೇವಸ್ಥಾನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮಳಗೆ, ಸಿ ಎನ್ ಕುಲಕರ್ಣಿ, ಎಕನಗೌಡ ಮುದ್ದನಗೌಡ್ರ, ಮಂಜನಗೌಡ ಸಂಧಿಮನಿ, ಅಜ್ಜನಗೌಡ ಸಂಧಿಮನಿ, ಮಂಜುನಾಥ ಪವಾರ, ಜಿ ಬಿ ತುಪ್ಪದ, ರಾಚಯ್ಯ ಹಿರೇಮಠ, ಗೋವಿಂದರಾವ್ ಕುಲಕರ್ಣಿ, ಈರಯ್ಯ ಶಾಸ್ತ್ರಿಗಳು, ಮಾಂತೇಶ ಶಾಸ್ತ್ರಿಗಳು, ವಿರುಪಾಕ್ಷ ಬೇವಿನಗಿಡದ, ಬೀಮಣ್ಣಾ ಬಾರ್ಕಿ, ಮಲ್ಲಯ್ಯ ತೋರಗಗಲ್ಲಮಠ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.