ತಾಲೂಕಿನ ವಿವಿಧದಡೆ ಸಂಭ್ರಮದ ಬಕ್ರೀದ ಆಚರಣೆ
ಹುಕ್ಕೇರಿ 10: ತಾಲೂಕಿನ ಸಂಕೇಶ್ವರ, ಹುಕ್ಕೇರಿ ಹಾಗೂ ಪಾಶ್ಚಾಪೂರ ನಗರಗಳಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಿಸಲಾಯಿತು. ಈದುಲ್ ಆಝ್ಹಾ ಅಥವಾ ಬಕ್ರೀದ ಹಬ್ಬವು ತ್ಯಾಗ ಮತ್ತು ಬಲಿದಾನ ಸಂಕೇತವಾಗಿದೆ. ವಿಶ್ವದ ಸರ್ವ ಮುಸಲ್ಮಾನರು ಈ ದಿನದಂದು ಪ್ರವಾದಿ ಇಬ್ರಾಹಿಂ ಅವರ ಪುತ್ರ ಇಸ್ಮಾಯಿಲ್ ಹಾಗೂ ಪತ್ನಿ ಹಾಜಿರಾ ಅವರನ್ನು ಸ್ಮರಿಸುವ ಮತ್ತು ದೇವರ ಮೇಲೆ ಅಪಾರ ನಂಬಿಕೆ ಈ ಹಬ್ಬದ ಸಂಕೇತ ಪ್ರತಿಯೊಬ್ಬ ಮುಸಲ್ಮಾನರು ಈ ದಿನದಂದು ಶುಭ್ರ ಬಟ್ಟೆ ತೊಟ್ಟು ಮಶೀದಿಗಳಲ್ಲಿ ಸಾಮೂಹಿಕ ಪ್ರರ್ಥನೆ ಗೈದು ಹಬ್ಬ ಆಚರಿಸುತ್ತಾರೆ.
ಪಾಶ್ಚಾಪೂರ ನಗರದಲ್ಲಿ ಅಬ್ದುಲ್ ಗಣಿ ನೇತೃತ್ವದಲ್ಲಿ ಮುಸಲ್ಮಾನ ಬಾಂಧವರು ಪ್ರಾರ್ಥನೆ ಮಾಡಿದರು. ಹುಕ್ಕೇರಿ ನಗರದಲ್ಲಿ ಬೆಳಿಗ್ಗೆಯಿಂದ ಮಳೆ ಬರುತ್ತಿರುವದರಿಂದ ಈದ್ಗಾ ಮೈದಾನಕ್ಕೆ ಹೋಗದೆ ಜಾಮಿಯಾ ಮಶೀದಿ, ಕಾರಂಜಾ ಮಶೀದಿ, ಮೋಕಾಶಿ ಮೋಹಲ್ಲಾ, ಕಾಲಿ ಮಶೀದ, ಮಮದಿಯಾ ಮಶೀದಿಗಳಲ್ಲಿ ಪ್ರಾರ್ಥನೆ ನೆರವೇರಿಸಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮೌಲಾನಾ ಅಬ್ದುಲ್ ಬಾಗಬಾನ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ ಹಬ್ಬವನ್ನು ಇಂದು ಮುಸಲ್ಮಾನರು ಸಂಭ್ರಮದಿಂದ ಆಚರಿಸುವ ಮೂಲಕ ಪ್ರವಾದಿಗಳ ಸಂದೇಶವನ್ನು ಸಾರುತ್ತೆವೆ ಎಂದರು.ಈ ಸಂದರ್ಭದಲ್ಲಿ ಸಲಿಂ ಮಕಾನದಾರ, ಕಬೀರ ಮಲ್ಲಿಕ, ಡಾ, ಸಾದೀಕ ಮಕಾನದಾರ, ರಾಜು ಮೋಮಿನದಾದಾ, ಫಾರೂಕ್ ಮುಲ್ಲಾ, ಇರ್ಷಾದ ಬಾಗವಾನ, ಶಹಜಾನ ಬಡಗಾಂವಿ, ನಾಶೀರ ಅತ್ತಾರ, ಫೀರೊಜ ಮಕಾನದಾರ ಮೋದಲಾದವರು ಉಪಸ್ಥಿತರಿದ್ದರು.