ಅಂತರರಾಷ್ಟ್ರೀಯ

ಕೃಷಿ ಕಾಯ್ದೆಗಳ ರದ್ದತಿ.. ಅಮೆರಿಕಾ ಕಾಂಗ್ರೆಸ್‌ ಸದಸ್ಯನ ಸಂತಸ

ಕೃಷಿ ಕಾಯ್ದೆಗಳ ರದ್ದತಿ.. ಅಮೆರಿಕಾ  ಕಾಂಗ್ರೆಸ್‌ ಸದಸ್ಯನ ಸಂತಸ

ನ್ಯೂಯಾರ್ಕ್, ನ  20   -ಭಾರತದಲ್ಲಿ   ಮೂರು  ಕೃಷಿ  ಕಾಯ್ದೆ    ರದ್ದುಗೊಳಿಸಿರುವುದನ್ನು   ಅಮೆರಿಕಾ   ಕಾಂಗ್ರೆಸ್  ಸದಸ್ಯ ಆಂಡಿ ಲೆವಿನ್ ಸ್ವಾಗತಿಸಿದ್ದಾರೆ.  ಕಳೆದೊಂದು  ವರ್ಷದಿಂದ   ರೈತರ  ಪ್ರತಿಭಟನೆಗಳಿಗೆ ಕೇಂದ್ರ  ಬಿಂದುವಾಗಿದ್ದ  ಮೂರು  ಕೃಷಿ ಕಾನೂನುಗಳನ್ನು ರದ್ದುಗೊಳಿಸಲು   ಸರ್ಕಾರ  ನಿರ್ಧಾರ ತೆಗೆದುಕೊಂಡಿದೆ ಎಂದು  ಎಂದು  ಭಾರತ  ಪ್ರಧಾನಿ ನರೇಂದ್ರ ಮೋದಿ  ಸ್ವತಃ   ಘೋಷಿಸಿದ್ದರು


ಈ ಹಿನ್ನೆಲೆಯಲ್ಲಿ ಒಂದು ವರ್ಷದಿಂದಲೂ    ಹೆಚ್ಚುಕಾಲ   ಪ್ರತಿಭಟನೆಯ  ನಂತರ ಭಾರತದಲ್ಲಿ  ಈ   ಮೂರು ಕೃಷಿ   ಕಾಯ್ದೆಗಳು   ರದ್ದಾಗಿರುವುದು  ತಮಗೆ ತುಂಬಾ ಸಂತೋಷವಾಗಿದೆ ಎಂದು ಆಂಡಿ ಲೆವಿನ್ ಹೇಳಿದ್ದಾರೆ.  ಅಲ್ಲದೆ ದುಡಿಮೆದಾರರು  ಒಟ್ಟಾಗಿದ್ದರೆ   ಕಾರ್ಪೋರೇಟ್‌  ಹಿತಾಸಕ್ತಿಗಳನ್ನು   ಸೋಲಿಸಬಹುದು ಎಂಬುದಕ್ಕೆ  ಇದೊಂದು  ನಿದರ್ಶನ   ಇದರಿಂದ ಭಾರತದಲ್ಲಿ ಮಾತ್ರವಲ್ಲ  ಜಾಗತಿಕ  ಪ್ರಗತಿ ಸಾಧಿಸಬಹುದು ಎಂದು ಆಂಡಿ ಲೆವಿನ್ ಟ್ವೀಟ್ಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸುದ್ದಿ ಓದಿ