ಅಂತರರಾಷ್ಟ್ರೀಯ

ಪ್ರತಿ ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ ಪರಿಚಯಿಸಲು ಮುಂದಾದ ಕೆನಡಾ; ವಿಶ್ವದಲ್ಲೇ ಮೊದಲ ರಾಷ್ಟ್ರ

ಪ್ರತಿ ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ ಪರಿಚಯಿಸಲು ಮುಂದಾದ ಕೆನಡಾ; ವಿಶ್ವದಲ್ಲೇ ಮೊದಲ ರಾಷ್ಟ್ರ

ಒಟ್ಟಾವ: ಜೂನ್ 13 :ಸಿಗರೇಟಿನ ಚಟ ಹಲವು ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದ್ದು, ಇದನ್ನು ಮನಗಂಡ ಕೆನಡಾ ರಾಷ್ಟ್ರ ಪ್ರತಿ ಸಿಗರೇಟಿನ ಮೇಲೆ ಲಿಖಿತ ಎಚ್ಚರಿಕೆ ನೀಡಲು ನಿರ್ಧರಿಸಿದೆ. ಇಂತಹ ನಿಲುವನ್ನು ವಿಶ್ವದಲ್ಲೇ ಮೊದಲ ರಾಷ್ಟ್ರ ಕೆನಡಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಎರಡು ದಶಕಗಳ ಹಿಂದೆ ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್‌ನಲ್ಲಿ ಗ್ರಾಫಿಕ್ ಫೋಟೋ ಎಚ್ಚರಿಕೆಗಳನ್ನು ಸೇರಿಸಲಾಗಿತ್ತು. ಕೆನಡಾ ಎರಡು ದಶಕಗಳ ಹಿಂದೆ ಫೋಟೋ ಎಚ್ಚರಿಕೆಗಳನ್ನು ಪರಿಚಯಿಸಿತ್ತು, ಆದರೆ ಒಂದು ದಶಕದಿಂದ ಚಿತ್ರಗಳನ್ನು ನವೀಕರಿಸಲಾಗಿಲ್ಲ. ಇದೀಗ ಲಿಖಿತ ಎಚ್ಚರಿಕೆ ನೀಡಲು ಮುಂದಾಗಿದೆ.

ಪ್ರತಿ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯ ಲಿಖಿತ ಎಚ್ಚರಿಕೆಗಳನ್ನು ಮುದ್ರಿಸುವುದರಿಂದ ಈ ಉತ್ತಮ ಸಂದೇಶಗಳು ಕೆಲವು ಒತ್ತಡಗಳಿಗೆ ಮಣಿದು, ಅಭ್ಯಾಸಗಳನ್ನು ರೂಢಿಸಿಕೊಂಡಿರುವ ಯುವಕರನ್ನು ಒಳಗೊಂಡಂತೆ ಜನರನ್ನು ತಲುಪಲು ಸಹಾಯ ಮಾಡುತ್ತದೆ

ಪ್ರಸ್ತಾವಿತ ಬದಲಾವಣೆಯ ಸಮಾಲೋಚನೆಯು ಶನಿವಾರ ಪ್ರಾರಂಭವಾಗಲಿದೆ ಮತ್ತು 2023 ರ ಉತ್ತರಾರ್ಧದ ವೇಳೆಗೆ ಬದಲಾವಣೆಗಳನ್ನು ಜಾರಿಗೆ ತರಲು ನಿರ್ಣಯ ತೆಗೆದುಕೊಂಡಿದೆ. ಪ್ರಸ್ತುತ ಸಿಗರೇಟ್ ಪ್ಯಾಕೇಟ್ ಗಳ ಮೇಲೆ ಪ್ರತಿ ಪಫ್ ನಲ್ಲೂ ವಿಷ ಎಂಬ ಅಂಶ ಇದೆ. ಆದರೆ ಇದು ಪ್ರಸ್ತಾವನೆ ಅಂಗೀಕಾರದ ಬಳಿಕ ಬದಲಾಗಬಹುದು ಎಂದು ಹೇಳಿದೆ.

ಸುದ್ದಿ ಓದಿ