ಅಂತರರಾಷ್ಟ್ರೀಯ

ಪುಟಿನ್ ಪ್ರವೇಶಕ್ಕೆ ನಿಷೇಧ ಹೇರಿದ ಕೆನಡಾ!

ಪುಟಿನ್ ಪ್ರವೇಶಕ್ಕೆ ನಿಷೇಧ ಹೇರಿದ ಕೆನಡಾ!

ಟೊರೊಂಟೊ: ಮೇ 18: ಉಕ್ರೇನ್‌ನಲ್ಲಿನ ಸಂಘರ್ಷದ ಕಾರಣ ಕೆನಡಾ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸುಮಾರು 1,000 ರಷ್ಯಾದ ನಾಗರಿಕರ ಪ್ರವೇಶವನ್ನು ನಿಷೇಧಿಸುವುದಾಗಿ ಘೋಷಿಸಿದೆ.

ಕೆನಡಾದ ರಕ್ಷಣಾ ಸಚಿವ ಮಾರ್ಕಾ ಮೆಂಡಿಸಿನೊ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಪುಟಿನ್ ಆಡಳಿತದ ಕ್ರೂರ ದಾಳಿಯಿಂದಾಗಿ ಕೆನಡಾ ಉಕ್ರೇನ್ ಜೊತೆ ನಿಂತಿದೆ. ಉಕ್ರೇನ್ ನಲ್ಲಿ ನಡೆದ ಕೃತ್ಯಗಳಿಂದಾಗಿ ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ” ಎಂದು ತಿಳಿಸಿದರು.

“ರಷ್ಯಾ ದಾಳಿಯನ್ನು ವಿರೋಧಿಸಿ, ಸುಮಾರು 1,000 ರಷ್ಯನ್ನರು, ಪುಟಿನ್ ಮತ್ತು ಅವರ ಸಹಚರರನ್ನು ಒಳಗೊಂಡಂತೆ – ಕೆನಡಾಕ್ಕೆ ಪ್ರವೇಶಿಸುವುದನ್ನು ನಿಷೇಧಿಸುತ್ತಿದ್ದೇವೆ” ಎಂದು ಅವರು ಹೇಳಿದರು.

ಸುದ್ದಿ ಓದಿ