40 ರಷ್ಯನ್ನರ ಮೇಲೆ ನಿರ್ಬಂಧ ವಿಧಿಸಿದ ಕೆನಡಾ
ಒಟ್ಟಾವಾ: ಮೇ 9 : ಉಕ್ರೇನ್‌ಗೆ ಮಿಲಿಟರಿ ಮತ್ತು ಮಾನವೀಯ ನೆರವಿನ ಜೊತೆಗೆ ರಷ್ಯಾದ ರಕ್ಷಣಾ ವಲಯಕ್ಕೆ ಸೇರಿರುವ 19 ಮಂದಿ ಸೇರಿದಂತೆ 40 ರಷ್ಯಾದ ವ್ಯಕ್ತಿಗಳ ವಿರುದ್ಧ ಕೆನಡಾ ಹೊಸ ನಿರ್ಬಂಧಗಳನ್ನು ವಿಧಿಸಿ ಘೋಷಣೆ ಮಾಡಿದೆ.
ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾನುವಾರ ಕೈವ್‌ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದ ನಂತರ ಕೆನಡಾದ ಪ್ರಧಾನ ಮಂತ್ರಿ ಕಚೇರಿ ಈ ಘೋಷಣೆ ಮಾಡಿದೆ.
ಭಾನುವಾರ ಉಕ್ರೇನ್‌ಗೆ ಹೆಚ್ಚಿನ ಮಿಲಿಟರಿ ಮತ್ತು ಮಾನವೀಯ ನೆರವನ್ನು ಘೋಷಿಸಿದ ಕೆನಡಾ ಪ್ರಧಾನ ಮಂತ್ರಿ ಕಚೇರಿ “ವಿಶೇಷ ಆರ್ಥಿಕ ಕ್ರಮಗಳ ನಿಯಮಾವಳಿಗಳ ಅಡಿಯಲ್ಲಿ ಕೆನಡಾ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುತ್ತದೆ” ಎಂದು ಹೇಳಿದೆ.
ಹೊಸ ನಿರ್ಬಂಧಗಳು ಏಪ್ರಿಲ್ 27 ರಂದು ವಿಧಿಸಲಾದ ಕ್ರಮಗಳ ಆಧಾರದ ಮೇಲೆ ಇರುತ್ತವೆ ಎಂದು ಜಸ್ಟಿನ್ ಟ್ರುಡೋ ತಿಳಿಸಿದರು.
21 ಹೆಚ್ಚುವರಿ ರಷ್ಯಾದ ವ್ಯಕ್ತಿಗಳು, ರಷ್ಯಾದ ಆಡಳಿತದ ನಿಕಟವರ್ತಿಗಳು ಮತ್ತು ರಷ್ಯಾದ ರಕ್ಷಣಾ ವಲಯಕ್ಕೆ ಸೇರಿದ 19 ಮಂದಿ ಮತ್ತು ರಷ್ಯಾದ ಮಿಲಿಟರಿಗೆ ಪರೋಕ್ಷ ಅಥವಾ ನೇರ ಬೆಂಬಲವನ್ನು ಒದಗಿಸುವ ಐದು ಘಟಕಗಳು ಸೇರಿದಂತೆ ವ್ಯಾಪಾರ ಗಣ್ಯರ ಮೇಲೆ ಕೆನಡಾ ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಅವರು ಹೇಳಿದರು.