ಪಾಲಿಟೆಕ್ನಿಕ್ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಕ್ಯಾಂಪಾಸ್ ಸಂದರ್ಶನ

ಪಾಲಿಟೆಕ್ನಿಕ್ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಕ್ಯಾಂಪಾಸ್ ಸಂದರ್ಶನ  Campus interview held at Polytechnic College

ಲೋಕದರ್ಶನ ವರದಿ 

ರಾಯಬಾಗ  12: ಕಾಲೇಜ್ ಕ್ಯಾಂಪಾಸ್‌ಗಳಲ್ಲಿ ನಡೆಯುವ ಸಂದರ್ಶನಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶ ಎಂದು ರೇಣುಕಾ ಶುಗರ​‍್ಸ‌ ಜನರಲ್ ಮ್ಯಾನೇಜರ್ ಸಂಗಮನಾಥ ಜಾಮದಾರ ಹೇಳಿದರು. 

ಶನಿವಾರ ರಾಯಬಾಗ ಪಾಲಿಟೆಕ್ನಿಕ್ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಕ್ಯಾಂಪಾಸ್ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಂತ್ರಿಕ ಶಿಕ್ಷಣ ಪಡೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಥಳೀಯ ಕಂಪನಿಗಳಲ್ಲಿ ಉದ್ಯೋಗ ಪಡೆದರೆ ತಮ್ಮ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು. 

ಫುಕೊಕು ಕಂಪನಿ ಬೆಳಗಾವಿ ಘಟಕದ ಎಚ್‌.ಆರ್ ಸಿದ್ದಪ್ಪ ರೆಂಟೆ ಮಾತನಾಡಿ, ನಮ್ಮ ಕಂಪನಿ ದೇಶದ ವಿವಿಧ ಭಾಗಗಳಲ್ಲಿ ಘಟಕಗಳನ್ನು ಹೊಂದಿದೆ. ಸ್ಥಳೀಯವಾಗಿ ಬೆಳಗಾವಿಯಲ್ಲಿ ಘಟಕ ಇದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಪಡೆಯಲು ಸಾಧ್ಯವಾಗಿದೆ. ಕಂಪನಿ ಒಳ್ಳೆಯ ವೇತನದ ಜೊತೆಗೆ ಎಲ್ಲ ಸೌಲಭ್ಯಗಳು ನೀಡುತ್ತಿದೆ ಎಂದರು.   

ಪ್ರಾಚಾರ್ಯ ಬಿ.ಎಸ್‌.ದಡ್ಡಿ, ಸಂಜಯ ಕೀಲ್ಲೆದಾರ, ಅಲ್ಲಪ್ಪ ತಳವಾರ, ಮೇರಿ, ಅರುಣ ಪೋಳ, ಎಮ್‌.ಆರ್‌.ಜೇಡರ, ರಾಜನ ಅನ್ವೇಕರ, ಸಿ.ಕೆ.ಒಡೆಯರ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.