ಅಂತರರಾಷ್ಟ್ರೀಯ

ಅಮೆರಿಕದಲ್ಲಿ 3.5 ಲಕ್ಷ ಮೀರಿದ ಕೋವಿಡ್-19 ಸಾವಿನ ಸಂಖ್ಯೆ- ಜಾನ್ಸ್ ಹಾಪ್ಕಿನ್ಸ್

ಅಮೆರಿಕದಲ್ಲಿ 3.5 ಲಕ್ಷ ಮೀರಿದ ಕೋವಿಡ್-19 ಸಾವಿನ ಸಂಖ್ಯೆ- ಜಾನ್ಸ್ ಹಾಪ್ಕಿನ್ಸ್

ಮಾಸ್ಕೋ, ಜ 3  :ಅಮೆರಿಕದಲ್ಲಿ ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,50,000 ಮೀರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ನವೀಕೃತ ವರದಿ ತಿಳಿಸಿದೆ.  ವಿಶ್ವವಿದ್ಯಾಲಯದ ಮಾಹಿತಿಯಂತೆ, ಸದ್ಯ, ಅಮೆರಿಕದಲ್ಲಿ ಸಾವಿನ ಸಂಖ್ಯೆ 3,50,186ರಷ್ಟಿದ್ದು,  ದೇಶದಲ್ಲಿ ಇದುವರೆಗೆ ಧೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 2,04,27,780 ಕ್ಕೆ ಮುಟ್ಟಿದೆ.ವಿಶ್ವದಾದ್ಯಂತ ಮಾರಕ ಕೊರೋನಾ ವೈರಸ್‍ ಸೋಂಕಿನಿಂದ ಇದರುವರೆಗೆ, 18,35,819 ಮಂದಿ ಸಾವನ್ನಪ್ಪುವುದರೊಂದಿಗೆ ಧೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 8.45 ಕೋಟಿ ದಾಟಿದೆ ಎಂದು  ವಿಶ್ವವಿದ್ಯಾಲಯದ ಕೋವಿಡ್‍-19 ಕುರಿತ ಮಾಹಿತಿ ತಿಳಿಸಿದೆ. 

 

ಸುದ್ದಿ ಓದಿ