ಅಂತರರಾಷ್ಟ್ರೀಯ

ಬ್ರೆಜಿಲ್‌ನಲ್ಲಿ 55 ಲಕ್ಷ ದಾಟಿದ ಕೊರೋನ ಸೋಂಕು ಪ್ರಕರಣಗಳು

ಬ್ರೆಜಿಲ್‌ನಲ್ಲಿ 55 ಲಕ್ಷ ದಾಟಿದ ಕೊರೋನ  ಸೋಂಕು ಪ್ರಕರಣಗಳು

ಬ್ರೆಸಿಲಿಯಾ, ಅಕ್ಟೋಬರ್ 30 :ಬ್ರೆಜಿಲ್‌ನಲ್ಲಿ ಹೊಸದಾಗಿ 26,106 ಹೊಸ ಕೊರೋನ ಪ್ರಕರಣ  ವರದಿಯಾಗಿದ್ದು ದೇಶದಲ್ಲಿ  ಈವರೆಗೆ ಸೋಂಕಿತರ ಸಂಖ್ಯೆ 55 ಲಕ್ಷ ದಾಟಿದೆ   ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.ಈ ನಡುವೆ  ಹೊಸದಾಗಿ ಇನ್ನೂ 513 ಸಾವುಗಳು ದಾಖಲಾಗಿದ್ದು, ವೈರಸ್‌ಗೆ ಸಂಬಂಧಿಸಿದ ರಾಷ್ಟ್ರೀಯ ಸಾವಿನ ಸಂಖ್ಯೆ 1, 58,969 ಕ್ಕೆ ಏರಿಕೆಯಾಗಿದೆ. 

ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಾವೊ ಪಾಲೊ ರಾಜ್ಯದಲ್ಲಿ  39,119 ಸಾವುಗಳು ಮತ್ತು 1,108,860 ಸೋಂಕು ಪ್ರಕರಣಗಳು  ದಾಖಲಾಗಿವೆ. ಅಮೆರಿಕ  ನಂತರ ಬ್ರೆಜಿಲ್ ನಲ್ಲಿ ಹೆಚ್ಚು ಕೊರೋನ ಸಾವಿನ ಪ್ರಕರಣ ವರದಿಯಾಗಿ.  ವಿಶ್ವದ ಎರಡನೇ ಅತಿ ಹೆಚ್ಚು ಕೊರೋನ ಬಾದಿತ  ರಾಷ್ಟ್ರವಾಗಿದೆ. 


ಸುದ್ದಿ ಓದಿ