ಕೋವಿಡ್-19: 4.39 ಕೋಟಿ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
ವಾಷಿಂಗ್ಟನ್, ಅ 28 (ಯುಎನ್ಐ)- ಜಾಗತಿಕ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 4 ಕೋಟಿ 39 ಲಕ್ಷಕ್ಕೆ ಏರಿದ್ದು, ಸಾವಿನ ಸಂಖ್ಯೆ 11,66,190ಕ್ಕೂ ಮೀರಿದೆ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ. ವಿಶ್ವಾದ್ಯಂತ ಒಟ್ಟು ಪ್ರಕರಣಗಳ ಸಂಖ್ಯೆ ಸದ್ಯ 4,39,07,193ರಷ್ಟಿದ್ದರೆ, ಸಾವಿನ ಸಂಖ್ಯೆ 11,66,193 ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತನ್ನ ಇತ್ತೀಚಿನ ನವೀಕೃತ ವರದಿಯಲ್ಲಿ ತಿಳಿಸಿದೆ. ಸಿಎಸ್ಎಸ್ಇ ಮಾಹಿತಿಯಂತೆ, ಅಮೆರಿಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿದ್ದು, ಇವು ಕ್ರಮವಾಗಿ 87,77,038 ಮತ್ತು 2,26,691 ರಷ್ಟಿವೆ. ಇನ್ನು ಪ್ರಕರಣಗಳ ವಿಷಯದಲ್ಲಿ 79,46,429 ಪ್ರಕರಣಗಳೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 1,19,502 ಕ್ಕೆ ಏರಿದೆ.
ಹೆಚ್ಚು ಪ್ರಕರಣಗಳನ್ನು ಹೊಂದಿರುವ ಇತರ ದೇಶಗಳಲ್ಲಿ ಬ್ರೆಜಿಲ್ (54,39,641), ರಷ್ಯಾ (15,37,142), ಫ್ರಾನ್ಸ್ (12,44,242), ಸ್ಪೇನ್ (11,16,738), ಅರ್ಜೆಂಟೀನಾ (11,16,609) ಸೇರಿವೆ ಸಿಎಸ್ಎಸ್ಇ ಅಂಕಿಅಂಶಗಳು ತಿಳಿಸಿವೆ.ಬ್ರೆಜಿಲ್ ನಲ್ಲಿ 1,57,946 ಸಾವುಗಳು ಸಂಭವಿಸುವುದರೊಂದಿಗೆ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. 30,000 ಕ್ಕಿಂತ ಹೆಚ್ಚಿನ ಸಾವುಗಳು ವರದಿಯಾಗಿರುವ ದೇಶಗಳಲ್ಲಿ ಮೆಕ್ಸಿಕೊ (89,814), ಯುನೈಟೆಡ್ ಕಿಂಗ್ ಡಮ್ (45,455), ಇಟಲಿ (37,700) ಮತ್ತು ಫ್ರಾನ್ಸ್ (35,582) ಸೇರಿವೆ.