ಸಿಎಂ ಇದ್ದಾರೆ, ಬದಲಾವಣೆ ಮಾಡುವ ಪ್ರಶ್ನೆ ಇಲ್ಲ : ಸಚಿವ ಸತೀಶ್ ಜಾರಕಿಹೊಳಿ
CM is there, there is no question of making changes: Minister Satish Jarkiholi
ಕಾರವಾರ 23 : ಈಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ, ಬದಲಾವಣೆ ಮಾಡುವ ಪ್ರಶ್ನೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕುಮಟಾದಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಪ್ರಗತಿ ವೀಕ್ಷಣೆ ಬಂದಿದ್ದ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದರು.ದಲಿತ ಸಿಎಂ ವಿಚಾರ ಕುರಿತು ಚರ್ಚೆ ಎಲ್ಲಾ ಕಡೆ ನಡೆಯುತ್ತದೆ. ಚರ್ಚೆ ಆದ ತಕ್ಷಣ ಸಿಎಂ ಮಾಡಲು ಆಗುವುದಿಲ್ಲ. ಸಿಎಂ ಆಕಾಂಕ್ಷಿಗಳು ನಮ್ಮ ಪಕ್ಷದಲ್ಲಿ ಹಲವು ಜನ ಇದ್ದಾರೆ.ಆದರೆ ಅಂತಿಮವಾಗಿ ಹೈಕಮಾಂಡ್ ಈ ವಿಚಾರದಲ್ಲಿ ನಿರ್ಧಾರಕ್ಕೆ ಬರುತ್ತದೆ. ಈಗ ಮುಖ್ಯಮಂತ್ರಿ ಅವರನ್ನ ಐದು ವರ್ಷಕ್ಕೆ ಅಂತಾ ಆಯ್ಕೆ ಮಾಡಿದ್ದಾರೆ. ಈಗ ಎದ್ದಿರುವ ಗೊಂದಲ ನಿವಾರಣೆ ಬ್ರೇಕ್ ಹಾಕಬೇಕಾಗಿದೆ. ಪಕ್ಷದಲ್ಲಿ ಈ ವಿಚಾರ ಸಾಕಷ್ಟು ಗೊಂದಲ ಇದೆ ಎಂದರು.
ಶಾಸಕರು ವಿದೇಶ ಪ್ರವಾಸ ಹೋಗುವುದು ರೋಟಿನ್ ಪ್ರಕ್ರಿಯೆ. ಮುಖ್ಯಮಂತ್ರಿ ಹುದ್ದೆ ಗೊಂದಲಕ್ಕೂ, ವಿದೇಶ ಪ್ರವಾಸಕ್ಕೂ ಸಂಭಂದವಿಲ್ಲ ಎಂದು ಸಚಿವ ಜಾರಕಿಹೊಳಿ ಸ್ಪಷ್ಟವಾಗಿ ಹೇಳಿದರು.ಪಕ್ಷದಲ್ಲಿ ನಾವ್ಯಾರು ಸಿಎಂ ಹುದ್ದೆತ ರೇಸ್ ನಲ್ಲಿ ಇಲ್ಲ. ಹಾಗಾಗಿ ನಾನು ಈಗ ಆರಾಮಾಗಿ ರಾಜ್ಯ ತಿರುಗುತ್ತಿದ್ದೇವೆ. ಇಲಾಖೆಯ ಕೆಲಸ ನೋಡುತ್ತಿದ್ದೇನೆ ಎಂದರು. ಬಿಜೆಪಿ ಬೇರೆಯವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು. ಈಗ ಅವರ ಎಂಎಲ್‌ಎ ಚಂದ್ರು ಲಮಾಣಿ ಶಿರಹಟ್ಟಿ ಅವರೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಿಜೆಪಿಯವರೇ ತಮ್ಮ ಭ್ರಷ್ಟಾಚಾರದ ಸಾಕ್ಷಿಯನ್ನ ಕೊಟ್ಟಿದ್ದಾರೆ ಎಂದು ಸಚಿವ ಜಾರಕಿಹೊಳಿ ನುಡಿದರು. ಸಚಿವ ಮಂಕಾಳ ವೈದ್ಯ , ಪಕ್ಷದ ಪದಾಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸಚಿವ ಜಾರಕಿಹೊಳಿ ಜೊತೆಗೆ ಇದ್ದರು .
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 