ಮಲಿಕವಾಡದಲ್ಲಿ 75 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ
ಚಿಕ್ಕೋಡಿ 28: ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಇಲಾಖೆಯಿಂದ ರೂ. 50 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರೂ. 25 ಲಕ್ಷ ಸೇರಿ ಒಟ್ಟು ರೂ. 75 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಾಂಗ್ರೆಸ್ ಮುಖಂಡರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸಂಭಾಜಿ ಪಾಟೀಲ ಅವರು, ನವದೆಹಲಿಯ ವಿಶೇಷ ಪ್ರತಿನಿಧಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರಕಾಶ ಹುಕ್ಕೇರಿ ಹಾಗೂ ಸ್ತ್ಲೂ್ಯೂಳ್ತಹ್ಠಿ್ಚುಷ್ಣ ಮತಕ್ಷೇತ್ರದ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ್ಖ್ಲ್ಠೂದಿ್ಣೈಹ್ಠಿ್ಚುಷ್ಣ ರಸ್ತೆಯಿಂದ ನವಗ್ರಾಮದವರೆಗೆ, ಹಾಗು ಸರ್ಕಾರಿ ಪ್ರೌಢ ಶಾಲೆಯ ಹಿಂಭಾಗದ ಮೂರು ರಸ್ತೆಗಳು ಮತ್ತು ನವಗ್ರಾಮದ ಇನ್ನೂ ಮೂರು ರಸ್ತೆಗಳು ಸೇರಿದಂತೆ ಒಟ್ಟು ಆರು ರಸ್ತೆಗಳನ್ನು ಸಿ.ಸಿ ರಸ್ತೆಗಳಾಗಿ ಅಭಿವೃದ್ಧಿಪಡಿಸಲು 75 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಳಾಸಾಹೇಬ ಪಾಟೀಲ ಮಾತನಾಡಿ, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಪ್ರಯತ್ನದಿಂದ ಮಲಿಕವಾಡ ಗ್ರಾಮದ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಇದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಪುಂಡಲೀಕ ಖೋತ, ಅಣ್ಣಾಸಾಹೇಬ ಧೋ ಇಂಗಳೆ, ಅಪ್ಪಾಸಾಬ ನಾಯಕ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಣ್ಣಾಸಾಹೇಬ ಇಂಗಳೆ, ಮನೋಹರ ಕುಡಚೆ, ರಾವಸಾಬ ಕುಂಬಾರ, ಸಂಜಯ ಉಗಾರೆ, ಸುಜೀತ ನಡುವಿನಮನಿ, ಅಪ್ಪಾಸಾಬ ಗುಡೆ, ಸುರೇಶ ಮಾನೆ, ಅಜೀತ ಠೋಂಬರೆ, ರಾಜೇಂದ್ರ ಕುಂಬಾರ, ಸಂಜಯ ಕುಂಬಾರ, ತುಕಾರಾಮ ವಂಜಿರೆ, ಸಂಜಯ ಶಿಖರೆ, ಬಾಬಾಸಾಹೇಬ ಮುಲ್ಲಾ, ಪರಶುರಾಮ ಕರಜಗೆ, ಉಮೇಶ ಮಠಪತಿ, ಶೂಭಂ ಕೋಳಿ, ಗುತ್ತಿಗೆದಾರ ರಾಮಗೌಡಾ ಪಾಟೀಲ, ಮಹೇಶ ಕಾಗವಾಡೆ ಸೇರಿದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.