ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ

ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ CC road and sewerage construction work in Scheduled Caste colonies

ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ

ರಾಯಬಾಗ 02 : ಪಟ್ಟಣ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಸೋಮವಾರ ಸಂಸದೆ ಪ್ರೀಯಂಕಾ ಜಾರಕಿಹೊಳಿ ಹಾಗೂ ಶಾಸಕ ಡಿ.ಎಮ್‌. ಐಹೊಳೆ ಜಂಟಿಯಾಗಿ ಚಾಲನೆ ನೀಡಿದರು.ಶಾಸಕ ಡಿ.ಎಮ್‌. ಐಹೊಳೆ ಮಾತನಾಡಿ, ಈಗಾಗಲೇ ರಾಯಬಾಗ ಪಟ್ಟಣದ ಅಭಿವೃದ್ಧಿಗಾಗಿ ಅನೇಕ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಆದ್ಯತೆ ಮೇರೆಗೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲಾಗುವುದು, ಈಗ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ ನಗರ ಮತ್ತು ವಿವೇಕ ನಗರದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಮಹಾವೀರ ಮೊಹಿತೆ, ಸದಾಶಿವ ಘೋರೆ​‍್ಡ, ಹಾಜಿ ಮುಲ್ಲಾ, ಹರೀಶ ಕುಲಗುಡೆ, ಅರ್ಜುನ ಬಂಡಗಾರ, ಅಣ್ಣಾಸಾಹೇಬ ಖೇಮಲಾಪುರೆ, ತಮ್ಮಾಣಿ ನಿಂಗನೂರೆ, ಸದಾನಂದ ಹಳಿಂಗಳಿ, ಜ್ಯೋತಿ ಕೆಂಪಟ್ಟಿ, ಕಿರಣ ಕಾಂಬಳೆ, ಮಹೇಶ ಕರಮಡಿ, ದೀಲೀಪ ಪಾಯನ್ನವರ, ಇಲಾಹಿ ಶೇಖ, ಸದಾಶಿವ ಮುರಗುಡೆ, ಕಾಡೇಶ ಐಹೊಳೆ,ಲೋಕೇಶ ಕಾಂಬಳೆ, ಚೇತನ ಕಾಂಬಳೆ, ಉದಯ ಕುಳ್ಳೋಳಿ, ತನುಜಾ ಶಿಂಗೆ, ದೀಲೀಪ ಜಮಾದಾರ, ಭಾರತಿ ಲೋಹಾರ ಸೇರಿದಂತೆ ಅನೇಕರು ಇದ್ದರು.ಫೋಟೊ: 02 ರಾಯಬಾಗ 1ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಅಂಬೇಡ್ಕರ ನಗರದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ  ಶಾಸಕ ಡಿ.ಎಮ್‌. ಐಹೊಳೆ ಚಾಲನೆ ನೀಡಿದರು. ಸಂಸದೆ ಪ್ರೀಯಂಕಾ ಜಾರಕಿಹೊಳಿ, ಮಹಾವೀರ ಮೊಹಿತೆ, ಸದಾಶಿವ ಫೋರೆ​‍್ಡ, ಹಾಜಿ ಮುಲ್ಲಾ, ಭಾರತಿ ಲೋಹಾರ ಇತರರು ಇದ್ದರು.