ಬೆಟಗೇರಿ ಪ್ರೌಢ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಪ್ರಾರಂಭೋತ್ಸವ

ಬೆಟಗೇರಿ ಪ್ರೌಢ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಪ್ರಾರಂಭೋತ್ಸವ              School commencement ceremony held at Betageri High School

ಲೋಕದರ್ಶನ ವರದಿ 

ಬೆಟಗೇರಿ ಪ್ರೌಢ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಪ್ರಾರಂಭೋತ್ಸವ                

ಬೆಟಗೇರಿ 02 :ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸನ್ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಜೂ.1ರಂದು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು. 

 ಶಾಲೆಯ ಪ್ರವೇಶ ದ್ವಾರ ಹಸಿರು ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಶಾಲಾ ಕೊಠಡಿಗಳ ಪ್ರಮುಖ ಬೀದಿಗಳು ರಂಗೊಲಿ ಚಿತ್ತಾರಗಳಿಂದ ಕೊಡಿತ್ತು. ಶಾಲಾ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮತ್ತು ಶಿಕ್ಷಕರು ಹಾಗೂ ಶಿಕ್ಷಣಪ್ರೇಮಿಗಳು ಶಾಲೆಯ ಮಕ್ಕಳಿಗೆ ಹೂ ಹಾಕಿ ಮತ್ತು ಸಿಹಿ ನೀಡಿ ಬರಮಾಡಿಕೊಂಡ ಬಳಿಕ ಶಾರದಾ ಮಾತೆ, ಸ್ವಾಮಿ ವಿವೇಕಾನಂದ, ಭಾರತ ಮಾತೆ ಭಾವಚಿತ್ರ ಮತ್ತು ಮೂರ್ತಿಗಳಿಗೆ ಪೂಜೆ, ಪುಷ್ಪ ಸಮರೆ​‍್ನ ಜರುಗಿತು. 

  ಗೋಕಾಕ ತಹಶೀಲ್ದಾರ ಮೋಹನ ಭಸ್ಮೆ ಮುಖ್ಯತಿಥಿಗಳಾಗಿ ಮಾತನಾಡಿ, ಉತ್ತಮ ತರಬೇತಿ ಪಡೆದ ನುರಿತ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವದು ನಿಮ್ಮ ಪುಣ್ಯ. ಈ ಶಾಲೆಯಲ್ಲಿ ಪರಿಸರ ಚೆನ್ನಾಗಿದೆ. ಮಕ್ಕಳಿಗೆ ಸಾಧನೆ ಮಾಡಬೇಕೆಂಬ ಕನಸು ಇರಬೇಕು. ಸರ್ಕಾರಿ ಶಾಲೆಗಳಲ್ಲಿಯೂ ಸರ್ಕಾರ ವಿವಿಧ ಸಹಾಯ, ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಮಕ್ಕಳು ಸರ್ಕಾರಿ ಶಾಲೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.  

  ಗೋಕಾಕ ಇಒ ಪರಶುರಾಮ ಗಸ್ತಿ, ಗೋಕಾಕ ಬಿಆರ್‌ಸಿ ಸಮನ್ವಯಾಧಿಕಾರಿ ಎಸ್‌.ವಿ.ಕುಲಕರ್ಣಿ ಶಾಲಾ ಪ್ರಾರಂಭೋತ್ಸವ ಕುರಿತು ಮಾತನಾಡಿದರು. ಈ ಶಾಲೆಯಲ್ಲಿ  ಮಕ್ಕಳ ಪ್ರವೇಶ ದಾಖಲಾತಿ ಬರದಿಂದ ನಡೆದಿದೆ. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಿದರು.  

ವಿಶೇಷ ಊಟದ ವ್ಯವಸ್ಥೆ: ಶಾಲಾ ಪ್ರಾರಂಭೋತ್ಸವ  ಕಾರ್ಯಕ್ರಮದ ಪ್ರಯುಕ್ತ ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಅತಿಥಿಗಳು, ಪಾಲಕರು, ಶಾಲಾ ಮಕ್ಕಳು, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಶಿಕ್ಷಣಪ್ರೇಮಿಗಳು ಮಾವಿನ ಹಣ್ಣು ಸಿಕರಣೆ ವಿಶೇಷ ಊಟದ ಸವಿ ಸವಿದು ಸಂಭ್ರಮಿಸಿದರು.   

  ಈ ವೇಳೆ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ ಹಾಗೂ ಸದಸ್ಯರು ಶ್ರೀಶೈಲ ಗಾಣಗಿ, ಶಿವಾಜಿ ನೀಲಣ್ಣವರ, ಲಕ್ಷ್ಮಣ ನೀಲಣ್ಣವರ, ಹನುಮಂತ ಹಾಲಣ್ಣವರ, ಬಸವರಾಜ ಪಣದಿ, ಕತ್ತಿ, ಸುರೇಶ ಕೌಜಲಗಿ, ಅರುಣ ಸವತಿಕಾಯಿ, ಈರಣ್ಣ ಪಟಗುಂದಿ, ಶುಭಾ.ಬಿ., ಸದಾನಂದ ತೆರಣಿ, ಗಣಪತಿ ಭಾಗೋಜಿ, ರಾಕೇಶ ನಡೋಣೆ, ಭಾಗ್ಯಶ್ರೀ ನಾಯಕ, ಬೆಟಗೇರಿ ಸುತ್ತಲಿನ ಹಳ್ಳಿಗಳ ಶಿಕ್ಷಣ ಪ್ರೇಮಿಗಳು, ಪಾಲಕರು, ಶಾಲೆಯ ವಿದ್ಯಾರ್ಥಿಗಳು ಇತರರು ಇದ್ದರು.