ಪ್ರಾಯದಿಂದ ಚಿಕ್ಕವನಾದರೂ ಅಭಿಪ್ರಾಯದಿಂದ ಅನುಭಾವಿಯಾಗಿದ್ದ ಚೆನ್ನಬಸವಣ್ಣ : ಡಾ. ಎಂ.ಎಸ್.ಮಾಗಣಗೇರಿ
Chennabasavanna was young in age but experienced in opinion: Dr. M.S.Maganageri
ಪ್ರಾಯದಿಂದ ಚಿಕ್ಕವನಾದರೂ ಅಭಿಪ್ರಾಯದಿಂದ ಅನುಭಾವಿಯಾಗಿದ್ದ ಚೆನ್ನಬಸವಣ್ಣ : ಡಾ.
ಎಂ.ಎಸ್.ಮಾಗಣಗೇರಿ
ವಿಜಯಪುರ 02 : ಚಿಕ್ಕ ವಯಸ್ಸಿನಲ್ಲಿದ್ದಾಗ ಚೆನ್ನಬಸವಣ್ಣ ಬಹಳ ತುಂಟನಾಗಿದ್ದರೂ, ಅನುಭಾವದ ನೆಲೆಯಲ್ಲಿ ಜ್ಞಾನದಿಂದ ಹಿರಿಯನಾಗಿದ್ದ. ಅನುಭವ ಮಂಟಪದಲ್ಲಿ ಭಾಗವಹಿಸಿ ವಚನಗಳನ್ನು ಹಾಡಿ, ಹರಿಸಿ ಉನ್ನತವಾದ ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದ. ಶರಣ ಬಳಗವನ್ನು ಮಂತ್ರ ಮುಗ್ಧರನ್ನಾಗಿಸುವಷ್ಟು ಅಪ್ರತಿಮ ಪ್ರತಿಭಾನ್ವಿತನಾಗಿದ್ದ. ಈತನು ವಚನಗಳನ್ನು ಪರಶೀಲಿಸಿ ತೀರ್ಮಾನ ಮಾಡಿ. ಮುದ್ರೆ ಹಾಕಿದ ಮೇಲೆಯೇ ವಚನಗಳು ಅಂಗೀಕಾರವಾಗುತ್ತಿದ್ದವು. ಶರಣ ಸಂಕುಲದಿಂದ ‘ಷಟ್‌ಸ್ಥಲ ಜ್ಞಾನಿ’ ಎಂದು ಕರೆಸಿಕೊಂಡ ಶ್ರೇಷ್ಠ ಅನುಭಾವಿ ಶರಣ ಚೆನ್ನಬಸವಣ್ಣ ಎಂದು ಚಡಚಣ ಸಂಗಮೇಶ್ವರ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಎಂ.ಎಸ್.ಮಾಗಣಗೇರಿ ಮನೋಜ್ಞವಾಗಿ ನೈಜವಾಗಿ ತಿಳಿಸಿದರು.
ನಗರದ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರವು ಚಿಂತನ-ಸಾಂಸ್ಕೃತಿಕ ಬಳಗ ಹಮ್ಮಿಕೊಂಡ ಅನುಭಾವಿಗಳು ಮರುಭೆಟ್ಟಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಅನುಭಾವ ಎಂಬುದು ನೆಲದೊಳಗಿನ ಖನಿಜ, ಅಂತರಂಗದ ಶುದ್ಧೀಕರಣ. ನಡೆ-ನುಡಿ, ಗುರುಸೇವೆ, ಲಿಂಗಪೂಜೆ, ಜಂಗಮ ತೃಪ್ತಿ, ಶರಣರ ಅನುಭಾವದ ಕುರಿತು ಮಾರ್ಮಿಕವಾಗಿ ಹೇಳಿದ ಚೆನ್ನಬಸವಣ್ಣ ಶೂನ್ಯ ಸಿಂಹಾಸನ ಪೀಠದ ಅಧ್ಯಕ್ಷನಾಗಿದ್ದನು” ಎಂದು ಹೇಳಿದರು.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವಿ.ಡಿ.ಐಹೊಳ್ಳಿಯವರು ಅಲ್ಲಮಪ್ರಭುವಿನಿಂದ ‘ದಾರ್ಶನಿಕ’ ಎಂದು ಕರೆಸಿಕೊಂಡ ಚನ್ನಬಸವಣ್ಣನ ಅನುಭಾವ ಸಾಗರದಷ್ಟು ವಿಶಾಲ. ಅನುಭವ ಮಂಟಪದಲ್ಲಿ ಎಲ್ಲರೂ ಚರ್ಚಿಸಿದ ಮೇಲೆ ಆ ವಚನಗಳನ್ನು ಚೆನ್ನಬಸವಣ್ಣನ ಅಂತಿಮ ನಿರ್ಣಯದೊಂದಿಗೆ ಗ್ರಂಥಭಂಡಾರಕ್ಕೆ ಸೇರುತ್ತಿದ್ದವು ಎಂದು.
ಬಿ.ಆರ್.ಬನಸೋಡೆ ಪ್ರಾರ್ಥಿಸಿದರು. ಡಾ. ಸುಭಾಸ ಕನ್ನೂರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಿ.ಎಂ.ಪಾಟೀಲ, ಡಾ. ಎಂ.ಎಸ್.ಮದಭಾವಿ, ಡಾ. ಆರ್.ಕೆ.ಕುಲಕರ್ಣಿ, ಎಂ.ಎಸ್.ಚಾಂದಕವಟೆ, ಎಸ್.ವಾಯ್.ಗದಗ, ಎಸ್.ಜಿ.ನಾಡಗೌಡ, ಎಂ.ಎಲ್.ಮದಭಾವಿ, ಕೆ.ಎಸ್.ಬಿರಾದಾರ, ಶರಣಗೌಡ ಪಾಟೀಲ, ಪ್ರೊ. ಜಿ.ಆರ್.ಕುಲಕರ್ಣಿ, ಡಾ. ವಿ.ಎಂ.ಬಾಗಾಯತ, ಡಾ. ಮಹಾಂತೇಶ ಗುಬ್ಬೇವಾಡಿ, ಎಂ.ಎಸ್.ಝಳಕಿ, ಡಾ. ಮಾಧವ ಗುಡಿ, ಅಂಬಾದಾಸ್ ಜೋಶಿ, ಎನ್.ಆರ್.ಕುಲಕರ್ಣಿ, ಖಾಡೆ, ಶರಣಗೌಡ ಪಾಟೀಲ, ಸುಭಾಸ ಯಾದವಾಡ, ಬಿ.ಸಿ.ಹತ್ತಿ, ಆರ್.ಜಿ.ಬ್ಯಾಕೋಡ, ದಾಕ್ಷಾಯಣಿ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 