ಇಂಡೋನೇಷ್ಯಾದಲ್ಲಿ ಕಂಬಕ್ಕೆ ಬಸ್ ಡಿಕ್ಕಿ: 15 ಸಾವು, 16 ಮಂದಿಗೆ ಗಾಯ
ಜಕಾರ್ತ: ಮೇ 16: ಇಂಡೋನೇಷ್ಯಾದ ಜಾವಾ ಪ್ರಾಂತ್ಯದಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ವೈದ್ಯರು ಹಾಗೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಜೊಕೆರ್ಟೊ ಜಿಲ್ಲೆಯ ಟೋಲ್ ರಸ್ತೆಯಲ್ಲಿ ಇಂದು ಬೆಳಗ್ಗೆ ಬಸ್ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿದೆ ಎಂದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳ ಅಧಿಕಾರಿ ಐ ವೇಯ್ನ್ ಸುಯ್ಟ್ನಾ ಹೇಳಿದ್ದಾರೆ. “ಬಹುಶಃ ಡ್ರೈವರ್ ತುಂಬಾ ದಣಿದಿರಬಹುದು, ಆದ್ದರಿಂದ ಅವನಿಗೆ ಬಸ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಲಿದ್ದು, ಅಪಘಾತಕ್ಕೆ ನಿಖರವಾದ ಕಾರಣವನ್ನು ಕಂಡುಹಿಡಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಡಾ.ವಹೀದೀನ್ ಸುದಿರೊಹುಸೊಡೊ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಪ್ರಭಾರಿ ಡಾ.ಮುಹಮ್ಮದ್ ಬೇಯು ಎಸ್‌ಡಿ, “13 ಮೃತದೇಹಗಳು ತಮ್ಮ ಆಸ್ಪತ್ರೆಯಲ್ಲಿದ್ದು, ತಲಾ ಒಂದು ಸಿಟ್ರಾ ಮೆಡಿಕಾ ಆಸ್ಪತ್ರೆ ಮತ್ತು ಬಸೋನಿ ಆಸ್ಪತ್ರೆಯಲ್ಲಿವೆ ಎಂದು ತಿಳಿಸಿದ್ದಾರೆ. ಗಾಯಾಳುಗಳನ್ನು ಬಸೋನಿ ಆಸ್ಪತ್ರೆ, ಸಿಟ್ರಾ ಮೆಡಿಕಾ ಆಸ್ಪತ್ರೆ, ಎಮ್ಮಾ ಆಸ್ಪತ್ರೆ ಮತ್ತು ಗಟೋಯೆಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.